ಕಾರ್ಕಳ| ಗೋಶಾಲೆಯ ಗಂಜಲ ಸೋರಿಕೆಯಿಂದ ಕೆರೆ ಕಲುಷಿತ: ಕ್ರಮಕ್ಕೆ ಒತ್ತಾಯಿಸಿ ಅಯ್ಯಪ್ಪ ವೃತಧಾರಿಗಳಿಂದ ಮನವಿ

Update: 2023-12-26 15:25 GMT

ಕಾರ್ಕಳ: ಬಂಡೀಮಠ ಸಮೀಪದ ಜೋಗಿನಕೆರೆ ಅಯ್ಯಪ್ಪ ಮಂದಿರ ಕೆರೆಗೆ ಸಮೀಪದ ಗೋಶಾಲೆಯ ಗಂಜಲ ಸೋರಿಕೆಯಿಂದ ಇಡೀ ಕೆರೆ ಕಲುಷಿತವಾಗಿದ್ದು, ಇದರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕುರಿತು ಕ್ರಮಕ್ಕೆ ಆಗ್ರಹಿಸಿ ಅಯ್ಯಪ್ಪ ವೃತಧಾರಿಗಳು ಕಾರ್ಕಳ ಪುರಸಭೆಗೆ ಮನವಿ ಮಾಡಿದ್ದಾರೆ.

ಬಂಡೀಮಠ ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡು ಗೋಪಿನಾಥ ಭಟ್ ಎಂಬವರು ಕಳೆದ ಹಲವು ವರ್ಷಗಳಿಂದ ಗೋಶಾಲೆಯನ್ನು ನಡೆಸುತ್ತಿದ್ದು, ಈ ಗೋಶಾಲೆಗೆ ಹೊಂದಿಕೊಂಡೇ ಜೋಗಿನಕೆರೆ ಅಯ್ಯಪ್ಪ ಮಂದಿರವಿದೆ, ಇಲ್ಲಿನ ಅಯ್ಯಪ್ಪ ವೃತಧಾರಿಗಳು ಸ್ನಾನ ಹಾಗೂ ಪೂಜೆಗೆ ಪುರಾತನ ಜೋಗಿನಕೆರೆಯ ನೀರನ್ನೇ ಉಪಯೋಗಿಸುತ್ತಿದ್ದು,ಇತ್ತೀಚಿನ ಕೆಲವು ವರ್ಷದಿಂದ ಗೋಶಾಲೆಯಲ್ಲಿನ ದನಕರುಗಳ ಗಂಜಲವು ಕೆರೆಯ ಸಮೀಪದ ಚರಂಡಿಯಲ್ಲಿ ಹರಿಯುತ್ತಿದ್ದು ಮಾತ್ರವಲ್ಲದೇ ಇದು ಸಮೀಪದ ಕೆರೆಗೆ ಇಂಗುತ್ತಿದೆ. ಇದರಿಂದ ಕೆರೆಯ ನೀರು ಕಲುಷಿತವಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಈ ಕುರಿತು ಪುರಸಭಾ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

ಗೋಶಾಲೆ ನಿರ್ವಾಹಕರು ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಭಕ್ತರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News