ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯದ ಕುರಿತು ಪ್ಯಾನಲ್ ಚರ್ಚೆ

Update: 2024-10-14 13:39 GMT

ಉಡುಪಿ, ಅ.14: ಧ್ಯಾನ, ಯೋಗ, ಕ್ರೀಡೆ ಹಾಗೂ ಉತ್ತಮ ಹವ್ಯಾಸ ಗಳಿಂದ ದೈಹಿಕ ಮತುತಿ ಮಾನಸಿಕ ಆರೋಗ್ಯ ಉತತಿಮಗೊಳ್ಳುತತಿದೆ ಎಂದು ಪ್ರೊ. ಬಾಸ್ಕರ್‌ಎಸ್ ಪ್ಲೃಟ್ಟಿಅಭಿಪ್ರಾಯಪಟ್ಟರು.

ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ವಿಭಾಗ, ಆಂಗ್ಲ ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಆಯೋಜಿಸಲಾದ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಎಂಬ ವಿಷಯದ ಕುರಿತ ಪ್ಯಾನಲ್ ಚರ್ಚೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಡಾ.ಎಂ.ವಿ.ಶೆಟ್ಟಿ ವೃತಿಪರ ವಿಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ಸೋಶಿಯಲ್ ವರ್ಕ್ ವಿಭಾಗದ ಉಪನ್ಯಾಸಕಿ ಪ್ರಜಾ ಕ್ರಿಷ್ಣನ್, ಉಡುಪಿ ಶಿಕ್ಷಕ ಅಪೂರ್ವ, ಮಂಗಳೂರು ವಕೀಲ ರಾಧಿಕ, ಮಣಪಾಲದ ಕಿರಿಯ ಸಂಶೋಧನಾ ವಿದ್ಯಾರ್ಥಿ ಪ್ರಥ್ವಿ ನಾಯ್ಕ್, ಮಣಿಪಾಲ ಕೆಎಂಸಿಯ ಸಹಾಯಕ ಸಂಶೋಧಕಿ ಸ್ಪೂರ್ತಿ, ಬೆಂಗಳೂರು ಜೈನ್ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ರೀಶಲ್ ನೋಲಾ ಡೆಮಿಲೊ ಉಪಸ್ಥಿತರಿದ್ದರು.

ಪ್ಯಾನಲ್ ಚರ್ಚೆಯ ಮಾಡರೇಟರಾಗಿ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥ ಸೋಜನ್ ಕೆ.ಜಿ., ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ನಿಕೇತನಾ, ಐಕ್ಯೂಎಸಿ ಸಂಚಾಲಕ ಪ್ರೊ.ಶ್ರೀಮತಿ ಅಡಿಗ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಾಣಿ ಆರ್.ಬಲ್ಲಾಳ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News