‘ಎಸೆನ್ಷಿಯಲ್ಸ್ ಆಫ್ ನೇತ್ರ ವಿಜ್ಞಾನ’ ಪಠ್ಯಪುಸ್ತಕ ಬಿಡುಗಡೆ

Update: 2024-10-14 13:41 GMT

ಉಡುಪಿ, ಅ.14: ವೈದ್ಯಕೀಯ ಪಠ್ಯಪುಸ್ತಕ ಎಸೆನ್ಷಿಯಲ್ ಆಫ್ ನೇತ್ರವಿಜ್ಞಾನ ಇದರ ಬಿಡುಗಡೆ ಸಮಾರಂಭವು ಉಡುಪಿಯ ಓಷನ್ ಪರ್ಲ್‌ನಲ್ಲಿ ಅ.12ರಂದು ಜರಗಿತು.

ಕಾರ್ಯಕ್ರಮವನ್ನು ಐಎಂಎ ಉಡುಪಿ ಕರಾವಳಿ ಶಾಖೆಯ ನಿಕಟಪೂರ್ವ ಅಧ್ಯಕ್ಷೆ ಡಾ.ರಾಜಲಕ್ಷ್ಮಿ ಉದ್ಘಾಟಿಸಿದರು. ಪುಸ್ತಕದ ಮುದ್ರಣ ಆವೃತ್ತಿಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಬಿಡುಗಡೆ ಮಾಡಿದರು.

ಕರ್ನಾಟಕ ಆಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷ ಮತ್ತು ಪ್ರಸಾದ್ ನೇತ್ರಾಲಯ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಇ-ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕದ ಮುಖ್ಯ ಲೇಖಕಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥೆ ಡಾ.ಸುಲತಾ ಭಂಡಾರಿ ಪುಸ್ತಕ ಪರಿಚಯಿಸಿದರು.

ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯ ಪೈ, ನಿವೃತ್ತ ವಿಭಾಗ ಮುಖ್ಯಸ್ಥ ಡಾ.ಲಾವಣ್ಯ ರಾವ್, ಮಂಗಳೂರು ಯೆನೆಪೊಯ ವೈದ್ಯಕೀಯ ಕಾಲೇಜಿನ ನೇತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಉಮಾ ಕುಲಕರ್ಣಿ, ಡಾ.ಆಶ್ರಿತ್ ಕಾಮತ್ ಮತ್ತು ಡಾ.ನಿಹಿತ್ ಚಂದ್ರ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News