ವಳಕಾಡು ಶಾಲಾ ಸಮೀಪದ ಡ್ರೈನೆಜ್ ದುರಸ್ಥಿಗೆ ಆಗ್ರಹ

Update: 2024-10-21 13:20 GMT

ಉಡುಪಿ: ವಳಕಾಡಿನ ಸಂಯುಕ್ತ ಪ್ರೌಢಶಾಲೆ ಬಳಿ ಡ್ರೈನೆಜ್ ಚೆಂಬರನ್ನು ದುರಸ್ಥಿ ಪಡಿಸುವ ಕಾರಣದಿಂದ 15 ದಿನಗಳಿಂದ ಗುಂಡಿ ತೋಡಿಟ್ಟಿದ್ದು, ಈವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಪರಿಸರದಲ್ಲಿ ಗಬ್ಬುವಾಸನೆ ಹರಡಿಕೊಂಡಿದೆ.

ತೋಡಿಟ್ಟ ಗುಂಡಿಯಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದ್ದು, ಪರಿಸರದಲ್ಲಿ ಗಬ್ಬುವಾಸನೆ ಹರಡಿಕೊಂಡಿದೆ. ಪರಿಸರದಲ್ಲಿ ಪ್ರೌಢ ಶಾಲೆ ಇದ್ದು, ಶಾಲಾ ವಿದ್ಯಾರ್ಥಿಗಳ ಸಂಚಾರವು ಇಲ್ಲಿದೆ. ವಸತಿ ಸಂಕೀರ್ಣಗಳು ಕೂಡ ಇವೆ. ಸೊಳ್ಳೆ ಉತ್ಪತ್ತಿ ತಾಣವಾ ಗಿರುವ ಈ ಸ್ಥಳದಿಂದ ಮಲೇರಿಯಾ, ಡೆಂಗ್ಯೊ ಜ್ವರ ಬಾಧೆಗಳು, ಇನ್ನಿತರ ವ್ಯಾಧಿಗಳು ಹರಡುವ ಭೀತಿ ಎದುರಾಗಿದೆ.

ಆದುದರಿಂದ ನಗರಸಭೆ ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News