ಜಾನುವಾರುಕಟ್ಟೆ: ವಿದ್ಯಾಪೋಷಕ್ ಮನೆ ಹಸ್ತಾಂತರ

Update: 2024-10-27 13:39 GMT

ಉಡುಪಿ, ಅ.27: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ಯರಾದ ಪ್ರಥಮ ಬಿ.ಕಾಂ.ನ ಸಂಗೀತಾ ಹಾಗೂ ದ್ವಿತೀಯ ಪಿ.ಯು.ಸಿ.ಯ ಸುಪ್ರೀತಾ ಅವರಿಗೆ ಬ್ರಹ್ಮಾವರ ತಾಲೂಕಿನ ಜಾನುವಾರುಕಟ್ಟೆಯಲ್ಲಿ ಶಾರದಾ ಮತ್ತು ಪಾಂಡೇಶ್ವರ ರಾಮರಾಯ ಕುಟುಂಬದ ಪ್ರಾಯೋಜಕತ್ವದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಶಾರದಾರಾಮ’ ಶನಿವಾರ ಉದ್ಘಾಟನೆಗೊಂಡಿತು.

ಶಾರದಾ ರಾಮ ಕಾರಂತರ ಮಕ್ಕಳಾದ ಪಿ.ಗೋವಿಂದರಾಜ ಕಾರಂತ, ಪಿ. ವಾಸುದೇವ ಕಾರಂತ, ಜಯಲಕ್ಷ್ಮೀ ಉಪಾಧ್ಯ, ಸೀತಾಲಕ್ಷ್ಮೀ ಜಿ. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿರಿಯ ವಕೀಲ ಎ. ಎಸ್.ಎನ್.ಹೆಬ್ಬಾರ ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಬಿಲ್ಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಸಂಸ್ಥೆಯ ಕಾರ್ಯ ಕರ್ತರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ಸೀತಾರಾಮ ಭಟ್, ಭುವನಪ್ರಸಾದ್ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಪಿ.ಕೃಷ್ಣಮೂರ್ತಿ ಭಟ್, ಸಂತೋಷ ಕುಮಾರ್ ಶೆಟ್ಟಿ, ಕೆ.ಅಜಿತ್ ಕುಮಾರ್, ಅಶೋಕ ಎಂ., ಡಾ.ರಾಜೇಶ್ ನಾವಡ, ಗಣಪತಿ ಭಟ್, ನಾಗರಾಜ ಹೆಗಡೆ, ವಿನೋದಾ ಎಂ.ಕಡೆಕಾರ್, ನರಸಿಂಹ ಮೂರ್ತಿ, ಕಿಶೋರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗ ಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿ ಸಿದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 57ನೆಯ ಮನೆಯಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News