ಅಂಗಡಿಯಲ್ಲಿ ಅಕ್ರಮ ಪಟಾಕಿ ಮಾರಾಟ: ಆರೋಪಿ ಬಂಧನ
Update: 2024-11-01 15:03 GMT
ಮಣಿಪಾಲ : ಸ್ಟೋರ್ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪಟಾಕಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಪರ್ಕಳ ಜಂಕ್ಷನ್‌ನಲ್ಲಿ ಅ.31ರಂದು ಸಂಜ್ನೆ ವೇಳೆ ನಡೆದಿದೆ.
ಪ್ರಕಾಶ್ ಡಿ. ಎಂಬಾತ ತನ್ನ ಪ್ರಕಾಶ್ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು(ಪಟಾಕಿ) ಸಂಗ್ರಹಿಸಿ ಇಟ್ಟಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಆರೋಪಿ ಪ್ರಕಾಶ್ ಹಾಗೂ ಸುಮಾರು 42397 ರೂ. ಮೌಲ್ಯದ ವಿವಿಧ ಪಟಾಕಿಗಳನ್ನು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.