ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಬೇಕು: ಡಾ.ಪ್ರತಿಭಾ

Update: 2024-11-01 16:25 GMT

ಕಾರ್ಕಳ : ಕನ್ನಡ ವ್ಯಾವಹಾರಿಕ ಭಾಷೆಯಾಗಿ ಬೆಳೆಸಿ ಅಖಂಡ ಕರ್ನಾಟಕ ಇನ್ನಷ್ಟು ಬಲಿಷ್ಟಗೊಳ್ಳಲು ಶ್ರಮಿಸೋಣ, ಕನ್ನಡಿಗರ ಹೆಗ್ಗುರುತು ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಹೊಣೆ .ಕನ್ನಡ ಅಮೃತ ಭಾಷೆಯಾಗಿ ಮನೆ-ಮನಗಳಲ್ಲಿ ರಾರಾಜಿಸಲಿ ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಬೇಕು ಕಾರ್ಕಳ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಕರೆ ನೀಡಿದರು.

ಅವರು ಕಾರ್ಕಳದ ಗಾಂಧೀಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. 

ಸ್ಪಷ್ಟ ಕನ್ನಡ, ಸ್ಪುಟ ಕನ್ನಡ,ನಮ್ಮ ನಾಲಿಗೆಗಳಲ್ಲಿ ನಲಿದಾಡಲಿ ಕನ್ನಡವು "ಅಭಿಜಾತ ಭಾಷೆ" ವೈಜ್ಞಾನಿಕ ತಳಹದಿಯ ಭಾಷೆ, ಗಡಿಗಳನ್ನು ಮೀರಿ ಕನ್ನಡ ಬೆಳೆಯಲಿ, ವಿಶ್ವವನ್ನು ಪಸರಿಸಲಿ ಕರ್ನಾಟಕವು ಅಖಂಡವಾಗಿ ಉಳಿಯಬೇಕು. ನದಿ ವಿವಾದ, ಗಡಿವಿವಾದಗಳು ಕೇವಲ ಭೌಗೋಳಿಕ ಅಡೆತಡೆಗಳಾಗಿದ್ದು ಕನ್ನಡ ಮನಸುಗಳನ್ನು ವಿಶ್ವವ್ಯಾಪಿಯಾಗಿ ಬೆಳೆಸ ಬೇಕು. ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗೋಣ ಎಂದರು.

ಕನ್ನಡವು ಕಲಿಕಾ ಮಾಧ್ಯಮವಾಗಬೇಕು ಯುವ ಪೀಳಿಗೆಯಲ್ಲಿ ಓದುವ ಅಭಿರುಚಿ ಹುಟ್ಟಿಸುವಂತಹ ಪ್ರಯತ್ನಗಳಾಗ ಬೇಕು ಮೊಬೈಲ್ ಗೀಳಿನಿಂದ ಹೊರತಂದು ಸಾಹಿತ್ಯಾಭಿರುಚಿ ಮೂಡಿಸಬೇಕು ಕನ್ನಡ ವ್ಯಾವಹಾರಿಕ ಭಾಷೆಯಾಗಿ, ನಿತ್ಯದ ಭಾಷೆಯಾಗಿ ಬೆಳೆಯಬೇಕು. ಕನ್ನಡವು ವಿಶ್ವದೆಲ್ಲೆಡೆ ಪಸರಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡವು ಮೃತ ಭಾಷೆಯಾಗದೆ ಅಮೃತಭಾಷೆಯಾಗಬೇಕು. ಕನ್ನಡವು ಕನ್ನಡಿಗರ ಅಸ್ಮಿತೆ, ಕನ್ನಡಿಗರ ಹೆಗ್ಗುರುತು,ಕನ್ನಡವು ಮನಸಿನ-ಕನಸಿನ ಭಾಷೆಯಾಗಬೇಕು ಅಖಂಡ ಕರ್ನಾಟಕದ ಏಕತೆಗೆ ಧಕ್ಕೆ ಬಾರದಂತೆ ಮನೆಮನಗಳಲ್ಲಿ ಕನ್ನಡದ ಕಿಚ್ಚನ್ನು ಹತ್ತಿಸಬೇಕು ಎಂದರು.

ಪೋಲೀಸ್ ಇಲಾಖೆ, ಗೃಹ ರಕ್ಷಕ ದಳ, ಸ್ಕೌಟ್ಸ್ ಗೈಡ್ಸ್, ಶಾಲಾಮಕ್ಕಳು ಶಿಸ್ತಿನ ಪಥ ಸಂಚನಲದ ಮೂಲಕ ದಂಡಾಧಿಕಾ ರಿಗಳಿಗೆ ಧ್ವಜ ವಂದನೆ ನೀಡಿ ಗೌರವ ರಕ್ಷೆ ತೋರಿದರು.

ಕಾರ್ಕಳದ ಅನಂತಶಯನ ಸರ್ಕಲ್ ನಿಂದ ಗಾಂಧಿ ಮೈದಾನದವರೆಗೆ ವೈಭವಪೂರ್ಣ ಮೆರವಣಿಗೆ ಸಾಗಿತು. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಪ್ರಾರಂಭಿಸಲಾಯಿತು. ಅಕರ್ಷಕ ಟ್ಯಾಬ್ಲೋಗಳು ಸಾರ್ವಜನಿಕರಿಗೆ ಮುದ ನೀಡಿದವು.

ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪ ಟಿ ಶೆಟ್ಟಿ,, ಡಿ ವೈ ಎಸ್ ಪಿ ಅರವಿಂದ ಕಲಗುಚ್ಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News