ಉದ್ಯೋಗ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು
Update: 2024-11-18 15:40 GMT
ಬ್ರಹ್ಮಾವರ, ನ.18: ಕೆನಡಾ ದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಸಾವಿರಾರು ರೂ. ಹಣ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧೀಶ್ ರಾವ್(38) ಎಂಬವರಿಗೆ ಅಪರಿಚಿತರು ಕರೆ ಮಾಡಿ ಗ್ರ್ಯಾಂಡ್ ಇಮೇಜಿನ್ ಕನ್ ಸಲ್ಟೆನ್ಸಿ ಕಂಪೆನಿಯಿಂದ ಕೆನಡಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದರು. ಈ ಬಗ್ಗೆ ಅಧೀಶ್ ರಾವ್‌ನಿಂದ 2023ರ ಜ.12ರಿಂದ ಎ.24ರ ಮಧ್ಯೆ ಹಂತ ಹಂತವಾಗಿ ಒಟ್ಟು 95,000ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.