ಸಂವಿಧಾನದ ಆಶಯ ಈಡೇರಿಸಲು ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ: ಸುಂದರ ಮಾಸ್ತರ್

Update: 2024-11-18 17:12 GMT

ಉಡುಪಿ: ಹಳ್ಳಿ ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ಇಂದು ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಆರೂರು ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಆರೂರು ಗ್ರಾಮ ಶಾಖೆ ಉಧ್ಘಾಟಿಸಿದ ದ.ಸಂ.ಸ. ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಫ್ರೋಫೇಸರ್ ಕೃಷ್ಣಪ್ಪ ಸ್ಥಾಪಿಸಿದ ಈ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯ ಮೂಲೆ ಮೂಲೆಗೂ ವಿಸ್ತರಿಸುವ ಕೆಲಸ ನಾವು ಮಾಡಬೇಕು. ಈ ಸಂಘಟನೆಯ ಮೂಲಕ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಪ್ರಯೋಜನ ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಇರುವ ಏಕೈಕ ಸಂಘಟನೆ ಅಂಬೇಡ್ಕರ್ ವಾದ. ನಾವೆಲ್ಲರೂ ಇಲ್ಲಿ ಅಂಬೇಡ್ಕರ್ ಋಣವನ್ನು ತೀರಿಸಲು ಬಂದಿದ್ದೇವೆ. ಹೊಟ್ಟೆ ಪಾಡಿಗೆ ನಮಗೆ ಒಳ್ಳೆಯ ಉದ್ಯೋಗ ಇದೆ. ಆದರೆ ಧ್ವನಿ ಇಲ್ಲದ ನಮ್ಮ ಶೋಷಿತ ಸಮುದಾಯದವರಿಗೆ ಧ್ವನಿಯಾಗಲು ಹಳ್ಳಿ ಹಳ್ಳಿಗಳಲ್ಲೂ ದ.ಸಂ.ಸ.ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದರು.

ಬ್ರಹ್ಮಾವರ ಪೋಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಶಾಂತರಾಜ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಮುಖ್ಯ ಅತಥಿಗಳಾಗಿ ಆರೂರು ಬಬ್ಬುಸ್ವಾಮಿ ದೇವಸ್ಥಾನದ ಮೋಕ್ತೇಸರರಾದ ಅರುಣ್ ಕುಮಾರ್ ಶೆಟ್ಟಿ , ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್ , ಸಧಸ್ಯೆ ಪಾರ್ವತಿ, ಮಾಜಿ ಅಧ್ಯಕ್ಷ ರಾಜೀವ ಕುಲಾಲ್ , ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಅಣ್ಣಪ್ಪ ನಕ್ರೆ , ರಾಜೇಂದ್ರ ನಾಥ್ , ಮಂಜುನಾಥ ಹಳಗೇರಿ , ಭಾಸ್ಕರ ಮಾಸ್ಟರ್ , ಕುಮಾರ್ ಕೋಟ , ಶ್ರೀಧರ್ ಕುಂಜಿಬೆಟ್ಟು , ತಾಲೂಕು ಪದಾಧಿಕಾರಿ ಗಳಾದ ಶಂಕರ್ ದಾಸ್ ಚೆಂಡ್ಕಳ , ವಡ್ಡರ್ಸೆ ಶ್ರೀನಿವಾಸ, ವಿಠಲ ಉಚ್ಚಿಲ, ಪ್ರಶಾಂತ ಬಿರ್ತಿ, ವಿಜಯ ಗಿಳಿಯಾರು, ಶಿವಾನಂದ ಬಿರ್ತಿ, ಸುಧಾಕರ ಮಾಸ್ಟರ್ ಗುಜ್ಜರ್ ಬೆಟ್ಟು , ಹರೀಶ್ಚಂದ್ರ ಬಿರ್ತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾದ ಆರೂರು ಗ್ರಾಮ ಶಾಖೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು‌. ಆರೂರು ಶಾಖೆಯ ಪ್ರಧಾನ ಸಂಚಾಲಕರಾಗಿ ನರಸಿಂಹ ಅವರನ್ನು ಆಯ್ಕೆ ಮಾಡಲಾಯಿತು.

ನರಸಿಂಹ ಸ್ವಾಗತಿಸಿದರು. ಭಾಸ್ಕರ ವಂದಿಸಿದರು. ಶರತ್ ಆರೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News