ರಾಜ್ಯಮಟ್ಟದ ಫೆಸ್ಟ್ ‘ನಾವೊಂನ್ಮೇಶ್’: ಶಂಕರನಾರಾಯಣ ಕಾಲೇಜು ತಂಡ ಚಾಂಪಿಯನ್
ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಾಣಿಜ್ಯ ಮತ್ತು ವಿಜ್ಞಾನ ಸಂಸ್ಥೆ ವತಿಯಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಜರಗಿದ ರಾಜ್ಯಮಟ್ಟದ ಫೆಸ್ಟ್ ನಾವೊಂನ್ಮೇಶ್‌ನಲ್ಲಿ ಶಂಕರನಾರಾಯಣ ಮದರ್ ತೆರೇಸಾ ಪಿಯು ಕಾಲೇಜು ಚಾಂಪಿಯನ್ ಹಾಗೂ ಕುಂದಾಪುರ ಶ್ರೀವೆಂಕಟರಮಣ ಪಿಯು ಕಾಲೇಜು ದ್ವಿತೀಯ ಸ್ಥಾನ ಗೆದ್ದುಕೊಂಡಿತು.
ಈ ಸ್ಫರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ 20 ಕಾಲೇಜಿನ 550 ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ್ ಎ.ಹೆಗಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ವೃತ್ತಿ ಜೀವನ ಕಟ್ಟಿಕೊಳ್ಳಬೇಕು. ಮಾದಕ ವ್ಯಸನ, ಸೈಬರ್ ಅಪರಾಧ ಕೃತ್ಯವನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ ಎಂದರು.
ರೋಬೊಸಾಫ್ಟ್ ಕಂಪನಿಯ ಶ್ರುತಿ ರೇಷಲ್ ಡಿಸೋಜ ಮಾತನಾಡಿದರು. ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರತಿಭಾ ಎಂ.ಪಟೇಲ್ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಜಯಶೀಲ್ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ರಕ್ಷಿತಾ ಅಡಿಗ ವಿಜೇತರ ಪಟ್ಟಿ ಓದಿದರು. ವಿದ್ಯಾರ್ಥಿಗಳಾದ ರಿಯಾನ್ ಮತ್ತು ಫರ್ಜಾನ ಕಾರ್ಯಕ್ರಮ ನಿರೂಪಿಸಿದರು. ಶ್ರೀರಕ್ಷಾ ವಂದಿಸಿದರು.