ಉಡುಪಿ ನಗರಸಭೆ: ನಿಯಮ ಉಲ್ಲಂಘಿಸಿದಲ್ಲಿ ಪರವಾನಿಗೆ ರದ್ದು

Update: 2024-12-17 16:27 GMT

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಹಾಗೂ ಗೂಡಂಗಡಿಗಳ ಮಾಲಕರು ತಮಗೆ ಸೂಚಿಸಿದ ಸೀಮಿತ ವಾಪ್ತಿಯನ್ನು ಹೊರತು ಪಡಿಸಿ ಅನಧಿಕೃತವಾಗಿ ಹೆಚ್ಚುವರಿ ಪ್ರದೇಶವನ್ನು ವಿಸ್ತರಣೆ ಮಾಡಿ ಬಳಸಿ ಕೊಳ್ಳುವಂತಿಲ್ಲ. ಎಲ್ಲಾ ಗೂಡಂಗಡಿ ಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಸ್ವಚ್ಛತೆಯನ್ನು ಕಾಯ್ದು ಕೊಳ್ಳಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ಗೂಡಂಗಡಿಗಳು ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ತೊಂದರೆ ನೀಡುವಂತಿರಬಾರದು. ಫಾಸ್ಟ್‌ಫುಡ್ ಅಥವಾ ರಸ್ತೆ ಬದಿಗಳಲ್ಲಿ ಗೂಡಂಗಡಿಗಳ ಮೂಲಕ ಹೋಟೆಲ್ ನಡೆಸುವವರು ಆಹಾರ ಪದಾರ್ಥ ಗಳನ್ನು ಮಾರಾಟ ಮಾಡಲು ಆಹಾರ ಗುಣಮಟ್ಟತೆ ಮತ್ತು ಸುರಕ್ಷತಾ ಇಲಾಖೆಯಿಂದ ಪರವಾನಿಗೆ ಪಡೆದಿರಬೇಕು ಹಾಗೂ ಯಾವುದೇ ಗೂಡಂಗಡಿಗಳಲ್ಲಿ ತಂಬಾಕು ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.

ಬೀದಿ ಬದಿಯಲ್ಲಿ ವ್ಯಾಪಾರಸ್ತರು ಹಾಗೂ ಗೂಡಂಗಡಿ ಮಾಲಕರು ನಗರಸಭೆ ಸೂಚಿಸಿರುವ ನಿಯಮವನ್ನು ಪಾಲಿಸದೇ ಇದ್ದಲ್ಲಿ ಅಂತಹ ಗೂಡಂಗಡಿ ಮಾಲಕರಿಗೆ ೫೦೦೦ ರೂ. ದಂಡ ವಿಧಿಸಿ, ಗೂಡಂಗಡಿಯನ್ನು ತೆರವು ಗೊಳಿಸಿ ಪರವಾನಿಗೆ ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News