ಉಡುಪಿ: ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆ ವಿಜೇತರು

Update: 2024-12-18 14:28 GMT

ಉಡುಪಿ, ಡಿ.18: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಂಜಿಎಂ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ ಎಂಜಿಎಂ ಕಾಲೇಜಿನಲ್ಲಿ ಇತೀಚೆಗೆ ನಡೆಯಿತು.

ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪುಷ್ಪಾಂಜಲಿ ಮಂಗಳೂರು, ಚಿತ್ರಕಲಾ ಶಿಕ್ಷಕ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿದ್ದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಲಾವಿದ ಜನಾರ್ದನ ಹಾವಂಜೆ ಸಂಘಟಕರಾಗಿ ಸ್ಪರ್ಧೆ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರ ಗಳನ್ನು ವಿತರಿಸಲಾಯಿತು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಯ ವಿಜೇತರ ವಿವರ ಹೀಗಿದೆ...

ಪೂರ್ವ ಪ್ರಾಥಮಿಕ ವಿಭಾಗ(1ರಿಂದ 4ನೇ ತರಗತಿ): 1.ತೇಜಸ್ವಿ ಯು. ರಾವ್, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ ಉಡುಪಿ, 2. ಆರ್ಯ ಪೈ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್ ಉಡುಪಿ, 3. ದೇಷ್ಣ ಕುಲಾಲ್, ಎಸ್.ಆರ್.ಪಬ್ಲಿಕ್ ಸ್ಕೂಲ್ ಹೆಬ್ರಿ, ಸಮಾಧಾನಕರ: ಪ್ರವಿತ್ ವಿ.ಅಮೃತಭಾರತಿ ವಿದ್ಯಾಕೇಂದ್ರ ಹೆಬ್ರಿ .

ಪ್ರಾಥಮಿಕ ವಿಭಾಗ (5ರಿಂದ 7ನೇ ತರಗತಿ): 1. ನಿಹಾರ್ ಜೆ. ಎಸ್., ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ, 2. ನಿಧಿಶ್ ಜೆ. ನಾಯ್ಕ್, ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ, 3. ಪ್ರಿಯದರ್ಶಿನಿ ಎಸ್.ಡಿ,ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ಸಮಾಧಾನಕರ: ಸುಘೋಶ್ ಎಸ್. ಸಾಲ್ಯಾನ್, ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ.

ಪ್ರೌಢ ಶಾಲಾ ವಿಭಾಗ (8ರಿಂದ 10ನೇ ತರಗತಿ): 1.ಧನ್ವಿ ವಿ. ಪೂಜಾರಿ, ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ, 2.ಸಿಂಚನ ಮೆಂಡನ್, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ, 3.ಕೃಷ್ಣಪ್ರಸಾದ್ ಭಟ್, ಅಮೃತಭಾರತಿ ವಿದ್ಯಾಕೇಂದ್ರ, ಹೆಬ್ರಿ, ಸಮಾಧಾನಕರ: ಅವನಿ ಎಂ. ಮೆಸ್ತಾ, ಸರಕಾರಿ ಹೆಣ್ಣುಮಕ್ಕಳ ಶಾಲೆ ಉಡುಪಿ.

ಪದವಿ ಪೂರ್ವ ವಿಭಾ:1. ನಿಧಿಶ್, ಕೆ.ಪಿ.ಎಸ್. ಹಿರಿಯಡ್ಕ, 2.ಚೈತನ್ಯ ಗಣೇಶ್ ಪೂಜಾರಿ, ವಿವೇಕ ಪದವಿಪೂರ್ವ ಕಾಲೇಜು ಕೋಟ, 3. ಶ್ರೀಶಾಂತ್ ಆಚಾರ್ಯ, ಪೂರ್ಣಪ್ರಜ್ಞಾ ಪ.ಪೂ.ಕಾಲೇಜು ಉಡುಪಿ, ಸಮಾಧಾನಕರ: ಶರಧಿ, ವಿವೇಕ ಪದವಿಪೂರ್ವ ಕಾಲೇಜು ಕೋಟ.

ಪದವಿ ವಿಭಾಗ: 1.ಆಶ್ಲೇಷ್ ಆರ್. ಭಟ್, ಚಿತ್ರಕಲಾ ಮಂದಿರ ಉಡುಪಿ, 2.ಮಿಥುನ್ ಕುಮಾರ್ ಕೆ., ಚಿತ್ರಕಲಾ ಮಂದಿರ ಉಡುಪಿ, 3.ಅನಿಶ್, ಪೂರ್ಣಪ್ರಜ್ಞಾ ಕಾಲೇಜು ಉಡುಪಿ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News