ಉಡುಪಿ: ಖಾಯಂ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಕಡ್ಡಾಯ
Update: 2024-12-17 16:38 GMT
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾ ಗಿರುವ ಖಾಯಂ ಜಾಹಿರಾತು ಫಲಕಗಳಲ್ಲಿ ನಗರಸಭೆಯಿಂದ ನೀಡಲಾಗುವ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ದಾಖಲಿಸುವುದು ಕಡ್ಡಾಯವಾಗಿದೆ.
ಆದರೆ ಹಲವಾರು ಖಾಯಂ ಜಾಹಿರಾತುದಾರರು ತಮ್ಮ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆಯನ್ನು ನಮೂದಿಸದೇ ಇರುವುದು ಕಂಡು ಬಂದಿದ್ದು, ಖಾಯಂ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸದೇ ಇರುವವರು ಡಿಸೆಂಬರ್ ೨೩ರ ಒಳಗಾಗಿ ದಾಖಲಿಸಬೇಕು. ದಾಖಲಿಸದೇ ಇರುವ ಜಾಹಿರಾತು ಫಲಕಗಳನ್ನು ಅನಧಿಕೃತ ವೆಂದು ಭಾವಿಸಿ, ನಗರಸಭೆ ವತಿಯಿಂದ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.