ಉಚಿತ ನೇತ್ರ ತಪಾಸಣಾ - ಶಸ್ತ್ರಚಿಕಿತ್ಸಾ ಶಿಬಿರ
ಉಡುಪಿ: ಉಡುಪಿ ಶ್ರೀಸತ್ಯಸಾಯಿ ಸೇವಾ ಸಮಿತಿ ಮತ್ತು ನೀಲಾವರ ಶ್ರೀಸತ್ಯಸಾಯಿ ಭಜನಾ ಮಂಡಲಿ ಜಂಟಿ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು ಇತ್ತೀಚೆಗೆ ಕುಂಜಾಲಿನ ವಿಶ್ವಕೀರ್ತಿ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಅಮೆರಿಕಾ ನಿವಾಸಿ ದಿನೇಶ್ ಪೇಜಾವರ ಮಾತನಾಡಿ, 60 ವರ್ಷಗಳನ್ನು ಪೂರೈಸುತ್ತಿರುವ ಉಡುಪಿ ಸತ್ಯಸಾಯಿ ಸೇವಾ ಸಮಿತಿ ಹಲವು ವರ್ಷಗಳಿಂದ ಉಚಿತವಾಗಿ ತಿಂಗಳಿಗೊಂದು ಆಯುರ್ವೇದ ಚಿಕಿತ್ಸಾ ಶಿಬಿರ, ಹೊಮಿ ಯೋಪೆತಿ ಚಿಕಿತ್ಸಾ ಶಿಬಿರ ಹಾಗೂ ವರ್ಷಕ್ಕೊಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿದೆ ಎಂದರು.
ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಆಸ್ಪತ್ರೆಯ ಅಧಿಕಾರಿ ಶಂಕರ ಶೆಟ್ಟಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರಿಗೆ ಕೈಗೆಟಕುವ ದರದಲ್ಲಿ ಕಣ್ಣಿನ ಚಿಕಿತ್ಸೆ ನೀಡುವ ಸೇವಾ ಭಾವನೆಯಿಂದ ಸ್ಥಾಪಿಸಲಾಗಿರುವ ಆಸ್ಪತ್ರೆಯ ಕುರಿತು ಮಾಹಿತಿ ನೀಡಿದರು. ಮಧುರ್ ಉಡುಪ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ರೋಗಿಗಳ ಕಣ್ಣಿನ ತಪಾಸಣೆಯನ್ನು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ನಡೆಸಿಕೊಟ್ಟರು. ಶಿಬಿರದಲ್ಲಿ 166 ಮಂದಿ ಭಾಗವಹಿಸಿದ್ದು, ಅವರಲ್ಲಿ 90 ಮಂದಿಯನ್ನು ಹೆಚ್ಚಿನ ನೇತ್ರ ತಪಾಸಣೆಗೆ ಹಾಗೂ 25 ಮಂದಿಯನ್ನು ಶಸ್ತ್ರ ಚಿಕಿತ್ಸೆಗೆ ಆರಿಸಲಾಯಿತು.