ಅಕ್ರಮ ಮರಳು ಸಾಗಾಟ ಆರೋಪ: ಟಿಪ್ಪರ್ ಸಹಿತ ಇಬ್ಬರು ವಶಕ್ಕೆ

Update: 2024-12-28 16:10 GMT

ಸಾಂದರ್ಭಿಕ ಚಿತ್ರ

ಕೋಟ, ಡಿ.28: ಕೋಟತಟ್ಟು ಗ್ರಾಮದ ಪಡುಕೆರೆಯ ಜನನಿ ಕಾಂಪ್ಲೇಕ್ಸ್ ಹತ್ತಿರ ಡಿ.27ರಂದು ಅಕ್ರಮವಾಗಿ ಸಿಲಿಕಾ ಮರಳು ತೆಗೆಯುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಟಿಪ್ಪರ್ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳನ್ನು ಟಿಪ್ಪರ್ ಚಾಲಕ ಗದ್ದೇಪ್ಪ(34) ಹಾಗೂ ಬಾಲಕೃಷ್ಣ(29) ಎಂದು ಗುರುತಿಸಲಾಗಿದೆ. ಸಿಲಿಕಾ ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವ ಬಗ್ಗೆ ಬಂದ ಮಾಹಿತಿ ಯಂತೆ ದಾಳಿ ನಡೆಸಿದ ಪೊಲೀಸರು, ಗುಳ್ಳಾಡಿಯಲ್ಲಿರುವ ಕೋಸ್ಟಲ್ ಮಿನರಲ್ಸ್ ಫ್ಯಾಕ್ಟರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡರು. ಅದೇ ರೀತಿ ಟಿಪ್ಪರ್ ಲಾರಿ ಹಾಗೂ 3 ಯುನಿಟ್ ಸಿಲಿಕಾ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News