ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ನವೀಕೃತ ಶೋರೂಂ ಪುನರಾರಂಭ
ಉಡುಪಿ, ಡಿ.28: ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ನವೀಕೃತ ಶೋರೂಂ ಪುನರಾರಂಭಗೊಂಡಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ಫಿಲ್ಸರ್ ಬಾಬು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಜ್ರಾಭರಣಗಳ ಖರೀದಿ ಮೇಲೆ ಶೇ.25 ರವರೆಗೆ ರಿಯಾಯಿತಿ ಮತ್ತು ಹಳೆಯ ಮೈನ್ ಡೈಮಂಡ್ ಆಭರಣಗಳ ವಿನಿಮಯಕ್ಕೆ ಶೇ.100 ರಷ್ಟು ವಿನಿಮಯ ಮೌಲ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಶೋರೂಂ ಮಲಬಾರ್ ನ ಜನಪ್ರಿಯ ಬ್ರಾಂಡ್ ಗಳಾದ ಮೈನ್ ಡೈಮಂಡ್ಸ್, ಎರಾ ಅನ್ ಕಟ್ ಡೈಮಂಡ್ಸ್, ಡಿವೈನ್ ಹೆರಿಟೇಜ್ ಜ್ಯುವೆಲ್ಲರಿ, ಎಥಿಕ್ ಹ್ಯಾಂಡ್ ಕ್ರಾಫ್ಟೆಡ್ ಡಿಸೈನ್ಸ್, ಪ್ರೆಸಿಯಾ ಜೆಮ್ಸ್ಟೋನ್ ಸಂಗ್ರಹಗಳು ಮತ್ತು ವಿರಾಝ್ ಪೋಲ್ಡ್ ಅಭರಣಗಳ ಸಂಗ್ರಹಗಳನ್ನು ಹೊಂದಿದೆ.
ಅತ್ಯದ್ಭುತ ವಿನ್ಯಾಸಗಳ ಆಭರಣಗಳು ಸ್ಪರ್ಧಾತ್ಮಕ ಮತ್ತು ನ್ಯಾಯಯುತ ಬೆಲೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಐಷಾರಾಮಿ ಮತ್ತು ವಿಸ್ತರಿತ ಫ್ಲೋರ್ ಸ್ಪೇಸ್ ಕಲ್ಪಿಸಲಾಗಿದೆ. ಸಾಂಪ್ರದಾಯಿಕ ವಿನ್ಯಾಸಗಳು, ಆಕರ್ಷಕವಾದ ಬ್ರೈಡಲ್ ಸಂಗ್ರಹಗಳು, ಸಮಕಾಲೀನ ಅಭರಣಗಳು, ಅತಿಹಗುರದ ಅಭರಣಗಳು, ದೈನಂದಿನ ಉಡುಗೆಯ ಆಭರಣಗಳು ಸೇರಿದಂತೆ ಗ್ರಾಹಕರ ಅಭಿರುಚಿಗೆ ಮತ್ತು ಎಲ್ಲಾ ಸೀಸನ್ ಗಳಿಗೆ ತಕ್ಕಂತಹ ಆಭರಣಗಳು ಈ ಶೋರೂಂನಲ್ಲಿವೆ.
ಶೋರೂಂನಲ್ಲಿ ಅತಿ ದೊಡ್ಡ ಪ್ರದರ್ಶನ ಮತ್ತು ಮಾರಾಟ ಮೇಳವನ್ನೂ ಆಯೋಜಿಸಲಾಗಿದ್ದು, ಈ ಮೇಳ 2024 ರ ಡಿಸೆಂಬರ್ 28 ರಿಂದ 2025 ರ ಜನವರಿ 5 ರವರೆಗೆ ನಡೆಯಲಿದೆ. ಪುನರಾರಂಭದ ಈ ಸುಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗೆ ಪ್ರತೀ ಖರೀದಿಯೊಂದಿಗೆ ಉಚಿತ ಬೆಳ್ಳಿಯ ನಾಣ್ಯ ನೀಡಲಿದ್ದು, ಈ ಕೊಡುಗೆಯು ಜನವರಿ 05 ರವರೆಗೆ ಲಭ್ಯವಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.