ತಲೆ ತಿರುಗಿ ಬಿದ್ದ ಸವಾರನ ಬೈಕ್ ಕಳವು!
Update: 2024-12-27 15:51 GMT
ಉಡುಪಿ, ಜ.27: ತಲೆ ತಿರುಗಿ ಬಿದ್ದ ಸವಾರರೊಬ್ಬರ ಬೈಕ್ ಕಳವಾಗಿರುವ ಘಟನೆ ನಗರದ ಡಯಾನಾ ಹೋಟೆಲ್ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಡಿ.12ರಂದು ಸಂಜೆ ವೇಳೆ ನಡೆದಿದೆ.
ಹೆಸಕುತ್ತೂರು ಗ್ರಾಮದ ಚಂದ್ರ(39) ಎಂಬವರು ಕೆಎ-20 ಇಕ್ಯು 8031ನೇ ನಂಬರಿನ ತನ್ನ ಟಿವಿಎಸ್ ಬೈಕಿನಲ್ಲಿ ಹೋಗುತ್ತಿ ದ್ದಾಗ ತಲೆ ಸುತ್ತ ಬಂತೆನ್ನಲಾಗಿದೆ. ಅದಕ್ಕೆ ಅವರು ಬೈಕನ್ನು ಅಲ್ಲೇ ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡು ಹೋಗುವಾರ ತಲೆ ತಿರುಗಿ ಬಿದ್ದರು. ಒಂದು ಗಂಟೆಯ ನಂತರ ಎಚ್ಚರ ವಾಗಿದ್ದು ಅಲ್ಲೇ ಸಮೀಪ ಹೋಗಿ ನೋಡಿದಾಗ ಬೈಕ್ ಕಳವಾಗಿ ರುವುದು ಕಂಡುಬಂದಿದೆ. ಇದರ ಮೌಲ್ಯ 20ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.