ಬೈಕ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
Update: 2024-12-27 15:49 GMT
ಹೆಬ್ರಿ, ಡಿ.27: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ -ಹಾಲಾಡಿ ರಸ್ತೆಯಲ್ಲಿ ಡಿ.26ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ನಿತ್ಯಾನಂದ ರಾವ್(78) ಎಂದು ಗುರುತಿಸಲಾಗಿದೆ. ಇವರು ಮನೆಯ ಎದುರಿನ ರಸ್ತೆ ಇನ್ನೊಂದು ಬದಿಯಲ್ಲಿ ವಾಹನದಲ್ಲಿದ್ದವರೊಂದಿಗೆ ಮಾತನಾಡಿ ವಾಪಾಸ್ಸು ಮನೆಗೆ ಬರಲು ರಸ್ತೆ ದಾಟುತ್ತಿದ್ದಂತೆ ಹೆಬ್ರಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತನ್ನಲಾಗಿದೆ.
ಇದರಿಂದ ಮಣ್ಣು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ನಿತ್ಯಾನಂದ, ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಬೈಕ್ ಸವಾರ ಅಭಿಲಾಷ್ ಎಂಬಾತ ಕೂಡ ಗಾಯಗೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.