ಡಿ.29: ರೈತ ದಿನಾಚರಣೆ - ರೈತ ಸನ್ಮಾನ
Update: 2024-12-27 14:06 GMT
ಉಡುಪಿ, ಡಿ.27: ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಮತ್ತು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಹಯೋಗ ದೊಂದಿಗೆ ರೈತ ದಿನಾಚಾರಣೆ ಕಾರ್ಯಕ್ರಮ ಡಿ.29 ರವಿವಾರ ಸಂಜೆ 3 ಗಂಟೆಗೆ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ವಠಾರದಲ್ಲಿ ನಡೆಯಲಿದೆ.
ಪೆರಂಪಳ್ಳಿ ವಲಯ ಕೃಷಿಕ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮವನ್ನು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ವಿಶ್ವನಾಥ ರೈ ಉದ್ಘಾಟಿ ಸಲಿದ್ದಾರೆ. ಪೆರಂಪಳ್ಳಿ ಫಾತಿಮಾ ಮಾತೆ ಚರ್ಚ್‌ಧರ್ಮಗುರು ರೆ.ಫಾ. ವಿಶಾಲ್ ಲೋಬೋ ಶುಭಾಶಂಸನೆ ಮಾಡಲಿದ್ದಾರೆ.
ಹಿರಿಯ ಪ್ರಗತಿಪರ ಕೃಷಿಕರಾದ ಪೀಟರ್ ಡಿಸೋಜ, ಕೋಟಿ ಪೂಜಾರಿ ಮತ್ತು ಲಿಯೋ ಡಿಸೋಜಾ ಅವರನ್ನು ಸನ್ಮಾನಿ ಸಲಾಗುವುದು ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆ ತಿಳಿಸಿದೆ.