ಡಿ.29ರಂದು ಕೋಟಿ ಗಾಯತ್ರಿ ಜಪ ಯಜ್ಞ -ಚಂಡಿಕಾಯಾಗ

Update: 2024-12-27 12:50 GMT

ಉಡುಪಿ, ಡಿ.27: ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ವತಿಯಿಂದ ಕೋಟಿ ಗಾಯತ್ರಿ ಜಪ ಯಜ್ಞ ಹಾಗೂ ಚಂಡಿಕಾಯಾಗ ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.29ರಂದು ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28ರಂದು ಬೆಳಗ್ಗೆ 8 ರಿಂದ ತಂತ್ರಿಗಳ ಹಾಗು ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 6 ರಿಂದ ಅರಣಿಮಥನ, ಅಗ್ನಿ ಜನನ, ಕುಂಡ ಸಂಸ್ಕಾರ ಜರುಗಲಿದೆ ಎಂದರು.

29ರಂದು ಮುಂಜಾನೆ 6ರಿಂದ ಪ್ರಾರ್ಥನೆ, 8ರಿಂದ ವಿಪ್ರ ಮಹಿಳೆಯರಿಂದ ಸ್ತೋತ್ರ ಪಠಣ, ಕುಂಕುಮಾರ್ಚನೆ ನಡೆಯಲಿದೆ. 9.30 ಕ್ಕೆ ಚಂಡಿಕಾಯಾಗ ಪೂರ್ಣಹುತಿ, 10 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು, ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥರು ಭಾಗವಹಿಸಲಿದ್ದು, ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡಲಿದ್ದಾರೆ. 11.30 ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ಜರುಗಲಿದ್ದು, 12.30 ಅನ್ನಸಂತರ್ಪಣೆ ಇರಲಿದೆಂದು ಅವರು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ವೈ.ಸುಧಾಕರ್ ಭಟ್, ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್, ಕೋಶಾಧಿಕಾರಿ ಕೆ.ಎಸ್.ಕೇಶವ್ ರಾವ್, ಕಾಂತಿ ರಾವ್, ಪವಿತ್ರ ಅಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News