ಮೂಡಲಕಟ್ಟೆ ವಿದ್ಯಾ ಅಕಾಡೆಮಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ

Update: 2025-01-11 14:45 GMT

ಕುಂದಾಪುರ, ಜ.11: ಮೂಡಲಕಟ್ಟೆಯ ವಿದ್ಯಾಅಕಾಡೆಮಿ ಪ್ರಾಥಮಿಕ ಶಾಲೆ, ಪ್ರೀ-ಸ್ಕೂಲ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಗಾಗಿ ಬೆಂಗಳೂರಿನ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಪ್ರೀ-ಸ್ಕೂಲ್ ಸಂಯೋಜಕಿ ರಷ್ಮಾ ಶೆಟ್ಟಿ ಮತ್ತು ಶಾಲೆಯ ಆಡಳಿತಾಧಿಕಾರಿ ಪಾವನಾ ಮಹೇಶ್ ಅತಿಥಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ಕನ್ನಡ ಚಲನಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತು ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದು, ವಿದ್ಯಾ ಅಕಾಡೆಮಿಯ ಶೈಕ್ಷಣಿಕ ಪ್ರಯತ್ನಗಳನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾವನಾ ಮಹೇಶ್, ಈ ಪ್ರಶಸ್ತಿ ನಮ್ಮ ತಂಡದ ಶ್ರಮ, ಮಕ್ಕಳನ್ನು ಪ್ರೀತಿಯಿಂದ ಮತ್ತು ಸಂವೇದನೆಗಳಿಂದ ಬೆಳೆಸುವ ನಮ್ಮ ಪ್ರಯತ್ನದ ಪ್ರತಿಫಲ. ಮಕ್ಕಳಿಗೆ ಸೃಜನಾತ್ಮಕ ಮತ್ತು ಪ್ರೇರಣದಾಯಕ ಪರಿಸರ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ. ಈ ಪ್ರಶಸ್ತಿ ನಮಗೆ ಇನ್ನಷ್ಟು ಪ್ರೇರಣೆಯನ್ನು ನೀಡುತ್ತದೆಂದು ತಿಳಿಸಿದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News