ಪರಸ್ಪರ ಹೊಡೆದಾಟ: ಐವರ ಬಂಧನ

Update: 2025-01-11 15:27 GMT

ಹೆಬ್ರಿ, ಜ.11: ಹೆಬ್ರಿಯ ಹೆಬ್ರಿ-ಕಾರ್ಕಳ ಮುಖ್ಯ ರಸ್ತೆಯ ಶಾರದಾ ಜನರಲ್ ಸ್ಟೋರ್ ಬಳಿ ಜ.10ರಂದು ಮಧ್ಯಾಹ್ನ ವೇಳೆ ಪರಸ್ಪರ ಹೊಡೆದಾಡಿ ಕೊಳ್ಳುತ್ತಿದ್ದ ಐವರನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಂಭು , ಧ್ರುವರಾಜ್ ,ಅರುಣ್ ಕುಮಾರ್, ಅಭಿಷೇಕ್ ಮತ್ತು ರಾಹುಲ್ ಎಂಬವರು ಜೋರಾಗಿ ಬೊಬ್ಬೆ ಹಾಕುತ್ತಾ ಬೈದಾಡಿಕೊಂಡು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News