ಕಟಪಾಡಿ ಸಹಕಾರಿ ಸಂಘದ ಅವ್ಯವಹಾರ ವಿರೋಧಿಸಿ ಪ್ರತಿಭಟನೆ

Update: 2025-01-11 14:47 GMT

ಕಾಪು: ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ನಡೆದಿರುವ ಅವ್ಯವಹಾರವನ್ನು ವಿರೋಧಿಸಿ ಸಾರ್ವಜನಿಕರು ಇಂದು ಬೆಳಿಗ್ಗೆ ಸಂಘದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕಟಪಾಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ ಮಾತನಾಡಿ, ತಮ್ಮ ಅವಧಿಯಲ್ಲಿ ಉತ್ತಮ ವ್ಯವಹಾರ ಇದ್ದು ಇತ್ತೀಚಿನ 10 ವರ್ಷಗಳಲ್ಲಿ ಬಂದ ಬ್ಯಾಂಕ್ ಆಡಳಿತ ಮಂಡಳಿಯ ದುರಾಡಳಿತದಿಂದ ಸಾಕಷ್ಟು ಅವ್ಯವಹಾರಗಳು ಆಗುತ್ತಿವೆ. ಮುಂದಿನ ಅವಧಿಯಲ್ಲಿ ಇದೇ ಆಡಳಿತ ಸಮಿತಿಯ ಕೈಯಲ್ಲಿ ಮುಂದುವರೆದರೆ ಬ್ಯಾಂಕ್ ಮುಳುಗಡೆಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಸುನೀಲ್ ಡಿ.ಬಂಗೇರ ಮಾತನಾಡಿ, ಕಟಪಾಡಿಯ ರಾಜಕಾರಣಿಯೊಬ್ಬರ ಹೆಸರಿನಲ್ಲಿ 15 ಲಕ್ಷ ರೂ. ಸಮರ್ಪಕವಾದ ದಾಖಲೆ ಇಲ್ಲದೆ ಸಾಲ ನೀಡಿದ್ದು 8 ತಿಂಗಳ ಹಿಂದೆ ಮಹಿಳೆಯೊಬ್ಬರ ಹೆಸರಿಗೆ ನಕಲಿ ದಾಖಲೆಯನ್ನು ನೀಡಿ 45 ಲಕ್ಷ ರೂ. ಸಾಲ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ನ್ಯಾಯವಾದಿ ಸುಂದರ್ ಆಚಾರ್ಯ ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಿತಿನ್ ಸುವರ್ಣ, ದಯಾನಂದ ವಿ.ಬಂಗೇರ, ಕಟಪಾಡಿ ಗ್ರಾಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ, ನಹೀಮ್, ವಿಜಯ್ ಮಾಬಿಯಾನ್, ಶ್ರೀಕರ್ ಅಂಚನ್, ಆಶಾ ಅಂಚನ್, ಜೋಸೆಫ್ ಮಂತೆರೋ, ಆಗ್ನೆಸ್ ದೇಸಾ, ಅಬೂಬಕರ್, ಅನ್ವರ್, ಪ್ರಭಾಕರ ಆಚಾರ್ಯ, ಶಿವಣ್ಣ ಶೆಟ್ಟಿ, ಸುಗುಣ ಪೂಜಾರಿ, ಆನಂದ್, ಸುಧೀರ್ ಕರ್ಕೇರ, ನವೀನ್ ಎನ್.ಶೆಟ್ಟಿ, ಕಿಶೋರ್ ಅಂಬಾಡಿ, ಸತೀಶ್ ಮೂಳೂರು, ಕಿರಣ್ ಲೂಯಿಸ್, ಶಿಪ್ರಸಾದ್ ಶೆಟ್ಟಿ, ರವೀಂದ್ರ ಎಸ್., ಪ್ಲೇವಿಯಾ, ಭಾಸ್ಕರ್ ಪೂಜಾರಿ, ಗಿರೀಶ್ ಪಿತ್ರೋಡಿ ಮೊದಲಾದವರು ಉಪಸ್ಥಿತರಿದ್ದರು. ಕಟಪಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News