ದೊಡ್ಡಣಗುಡ್ಡೆ: ಪ್ರತಿಭಾವಂತ ಮದ್ರಸ ವಿದ್ಯಾರ್ಥಿಗಳಿಗೆ ಸನ್ಮಾನ

Update: 2025-01-13 14:15 GMT

ಉಡುಪಿ, ಜ.13: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ ರಾಜ್ಯ ಮಟ್ಟದ ಸ್ಮಾರ್ಟ್ ಸ್ಕಾಲರ್‌ಶಿಫ್ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದ ದೊಡ್ಡಣ್ಣಗುಡ್ಡೆಯ ರಹ್ಮಾನಿಯ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ತಸೀನ್ ಹಾಗೂ ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಗ್ರೌಂಡ್ ಝೋನ್ ವಿಭಾಗದ ಮೆಮೊರಿ ಟೆಸ್ಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಮಹಮ್ಮದ್ ರುಮಾನ್ ಅವರಿಗೆ ರಹ್ಮಾನಿಯ ಮದ್ರಸ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಕೆ.ಎಸ್.ಎಂ.ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಮುಹಮ್ಮದ್ ಕಾಸಿಂ, ಮಸೀದಿ ಖತೀಬರಾದ ಕಾಸಿಂ ಸಅದಿ, ಸದರ್ ಉಸ್ತಾದ್ ಅಬ್ದುಲ್ ರಹಮಾನ್ ಸಅದಿ, ಅಧ್ಯಾಪಕರಾದ ಹಸನ್ ಹನೀಫಿ, ರಝಾಕ್ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News