ಬೈಂದೂರಿನಲ್ಲಿ ನ್ಯಾಯಾಲಯ ಖಾಯಂಗೊಳಿಸುವಂತೆ ಆಗ್ರಹಿಸಿ ಮನವಿ

Update: 2024-08-12 14:44 GMT

ಬೈಂದೂರು: ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸದಂತೆ ಆಗ್ರಹಿಸಿ ಬೈಂದೂರು ತಾಲೂಕು ವಕೀಲರ ಸಂಘ ಸೋಮವಾರ ಬೈಂದೂರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ.

ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಕೇಳಿಕೊಂಡಿರುವುದು ಬೈಂದೂರು ಜನತೆಗೆ ಮಾಡುವ ಅನ್ಯಾಯವಾಗಿದೆ. ನ್ಯಾಯಾಲಯದಲ್ಲಿ ಕೊರತೆಗಳಿದ್ದಲ್ಲಿ ಸರಕಾರ ಮತ್ತು ಜಿಲ್ಲಾ ಉಚ್ಚ ನ್ಯಾಯಾಲಯ ಪರಿಹರಿಸಬೇಕೆ ವಿನಹ ನ್ಯಾಯಾಲಯವನ್ನು ದೂರದ ಕುಂದಾಪುರಕ್ಕೆ ವರ್ಗಾಯಿಸುವುದು ಪರಿಹಾರವಲ್ಲ ಎಂದು ಬೈಂದೂರು ತಾಲೂಕು ವಕೀಲರ ಸಂಘ ಮನವಿಯಲ್ಲಿ ತಿಳಿಸಿದೆ.

ಬೈಂದೂರು ಸಿವಿಲ್ ಮತ್ತು ಜೆ.ಎಫ್.ಎಂ ನ ನ್ಯಾಯಾಲಯವು ಬೈಂದೂರು ಜನತೆಯ ದಶಕದ ಹೋರಾಟದ ಫಲವಾ ಗಿದೆ. ಇದರ ಹಿಂದೆ ಹಲವು ಹೋರಾಟಗಾರರ ಪರಿಶ್ರಮವಿದೆ. ಬೈಂದೂರು ತಾಲೂಕು ಘೋಷಣೆ ಯಾದಾಗ ತಾಲೂಕಿ ನಲ್ಲಿ ಅತೀ ಹೆಚ್ಚಿನ ಪ್ರಕರಣಗಳಿರುವುದನ್ನು ಗಮನಿಸಿ ಬೈಂದೂರಿನಲ್ಲಿ ನ್ಯಾಯಾಲಯದ ಅವಶ್ಯಕತೆಯನ್ನು ಗಮನಿಸಿ ಮಂಜೂರು ಮಾಡಲಾಗಿದೆ.

ನ್ಯಾಯಾಲಯಕ್ಕಾಗಿ ಜಾಗ ಕಾಯ್ದಿರಿಸಿದ್ದು ಶೀಘ್ರ ಕಟ್ಟಡ ನಿರ್ಮಾಣ ಮಾಡಬೇಕು. ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯವು ಕುಂದಾಪುರದ ಕೆಲವು ವ್ಯಕ್ತಿಗಳ ವೈಯಕ್ತಿಕ ಹಿತಾಶಕ್ತಿಯನ್ನು ಪ್ರೋತ್ಸಾಹಿಸದೆ ಬೈಂದೂರಿನಲ್ಲಿ ನ್ಯಾಯಾ ಲಯ ಉಳಿಸಲು ಕ್ರಮಕೈಗೊಳ್ಳಬೇಕು ಎಂದು ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ. ಆಗ್ರಹಿಸಿದರು.

ಬೈಂದೂರು ತಾಲೂಕು ವಕೀಲರ ಸಂಘದ ಸದಸ್ಯರು ಜಾಥಾ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲ ಪ್ರಶಾಂತ ಪೂಜಾರಿ, ಲಿಂಗಪ್ಪ ಮೇಸ್ತ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News