ಕೊಲ್ಲೂರಿನಲ್ಲಿರುವ ಮಲಯಾಳಂ ಭಾಷಾ ಫಲಕಗಳ ತೆರವಿಗೆ ಮನವಿ

Update: 2023-10-18 15:53 GMT

ಕುಂದಾಪುರ, ಅ.18: ಕೊಲ್ಲೂರು ಮೂಕಾಂಬಿಕಾ ದೇವಳ ಆವರಣದ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳಲ್ಲಿ ಮಲಯಾಳಂ ಭಾಷೆಯ ನಾಮಫಲಕಗಳು ಅತಿ ಎನಿಸುವಷ್ಟು ತುಂಬಿಕೊಂಡಿದ್ದು, ಅವುಗಳನ್ನು ಅತಿಶೀಘ್ರದಲ್ಲಿ ತೆರವು ಗೊಳಿಸುವಂತೆ ಕೊಲ್ಲೂರಿನ ಸ್ವಯಂಜಾಗೃತಿ ಸೇವಾ ಟ್ರಸ್ಟ್ ಇಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.

ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ನಿಯೋಗವೊಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿರುವ ಇಂತಹ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡವನ್ನು ಹೊರತು ಪಡಿಸಿ ಅನ್ಯಭಾಷೆಯನ್ನು ಬಳಸಿರುವುದನ್ನು ಕೂಡಲೇ ತೆರವುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದೆ.

ಕೊಲ್ಲೂರಿನಲ್ಲಿ ಅತಿ ಅನಿಸುವಷ್ಟು ಮಲಯಾಳಂ ಭಾಷೆಯ ನಾಮಫಲಕಗಳು ತುಂಬಿಕೊಂಡಿದ್ದು, ಒಂದೊಮೆ ಕೇರಳ ರಾಜ್ಯದಲ್ಲಿರುವ ಭಾವನೆ ಮೂಡುತ್ತದೆ. ಇಂಥ ನಾಮಫಲಕಗಳು ಗುಡಿಯ ಆವರಣದಲ್ಲಿ ಎಲ್ಲೆಲ್ಲೂ ಕಾಣಸಿಗುತ್ತವೆ. ಆದ್ದರಿಂದ ತಾವು ತಕ್ಷಣ ಕ್ರಮಕೈಗೊಂಡು ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ನಿಯೋಗದಲ್ಲಿ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಅಜಯ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕನ್ನಡಿಗ, ಮಂಜು ಕನ್ನಡಿಗ ಹಾಗೂ ಉಮೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News