ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸಲು ಆಗ್ರಹಿಸಿ ಉಡುಪಿ ಡಿಸಿಗೆ ಮನವಿ
ಉಡುಪಿ : ಬೀಡಿ ಕಾರ್ಮಿಕರ ಕನಿಷ್ಟ ವೇತನ ಪರಿಷ್ಕರಣೆ ವಿಳಂಬ ವಾಗುತ್ತಿರುವ ಬಗ್ಗೆ ತಕ್ಷಣವೇ ನ್ಯಾಯ ಯೋಜಿತ ಬದು ಕಲು ಕನಿಷ್ಠ ವೇತನ ನಿಗದಿ ಪಡಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಿರಂತರವಾಗಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗನನಮುಖಿ ಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ಅನುಗುಣವಾಗಿ ಹಾಗೂ ಕನಿಷ್ಠ ವೇತನ ನಿಗಧಿಗೆ ಪೂಕರವಾಗಿ ಸುಪ್ರೀಂ ಕೋರ್ಟ್ ಸೂಚಿಸಿರುವ ಅಂಶಗಳ ಆಧಾರದಲ್ಲಿ ಕನಿಷ್ಠ ಕೂಲಿಯನ್ನು ನಿಗದಿ ಪಡಿಸಲು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಬಾರಿ ಕನಿಷ್ಠಿ ಕೂಲಿಯನ್ನು ಪರಿಷ್ಕರಿಸಿ ನಿಗಧಿ ಪಡಿಸುವಾಗ ಒಂದು ಸಾವಿರ ಬೀಡಿಯ ಕೂಲಿಯನ್ನು ೩೯೫ ರೂ. ಹಾಗೂ ತುಟ್ಟಿ ಭತ್ಯೆಯನ್ನು ಪ್ರತಿ ಪಾಂಯಿಂಟ್‌ಗೆ ೫ ಪೈಸೆಯಂತೆ ಮಾ.೧೪ರಿಂದಲೇ ಅನ್ವಯವಾಗುವಂಮತೆ ತಕ್ಷಣದಲ್ಲಿ ಪರಿಷ್ಕರಿ ಸಬೇಕು ಎಂದು ಸಮಿತಿ ಆಗ್ರಹಿಸಿದೆ.
ನಿಯೋಗದಲ್ಲಿ ಉಡುಪಿ ಜಿಲ್ಲಾ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರ ಹೋಬಳಿ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್ ಎಸ್., ಉಪಾಧ್ಯಕ್ಷೆ ಬಲ್ಕೀಸ್, ಸಿಐಟಿಯು ಜಿಲ್ಲಾ ಖಂಜಾಚಿ ಶಶಿಧರ ಗೊಲ್ಲ, ಮುಖಂಡರಾದ ನಳಿನಿ ಎಸ್., ವಸಂತಿ ಇಂದಿರನಗರ, ಭವಾನಿ ಬ್ರಹ್ಮವಾರ, ಮೋಹನ್ ಉಪಸ್ಥಿತರಿದ್ದರು.