ಪೊಲೀಸ್ ಸಬ್-ಇನ್‌ಸ್ಪೆಕ್ಟರ್, ಇಂಜಿನಿಯರ್ ಹುದ್ದೆ: ಅರ್ಜಿ ಆಹ್ವಾನ

Update: 2023-08-04 15:21 GMT

ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ದೆಹಲಿ ಪೊಲೀಸ್ ಪಡೆಗಳಲ್ಲಿ ಸಬ್-ಇನ್ಸ್‌ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ವೆಬ್‌ಸೈಟ್ -www.ssckkr.kar.nic.in- ಮತ್ತು - https://ssc.nic.in- ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ 20ರಿಂದ 25 ವರ್ಷ ಮತ್ತು ಇಂಜಿನಿಯರ್ ಹುದ್ದೆಗಳಿಗೆ 30ರಿಂದ 32 ವರ್ಷ ನಿರ್ದಿಷ್ಠ ವಯೋಮಿತಿ ಹೊಂದಿರುವ, ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ನೊಂದಣಿಗೆ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆಗಸ್ಟ್ 15 ಮತ್ತು ಇಂಜಿನಿಯರ್ ಹುದ್ದೆಗಳಿಗೆ ಆಗಸ್ಟ್ 16 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ:080-25502520ಅನ್ನು ಸಂಪರ್ಕಿ ಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News