ಜಾರ್ಖಂಡ್ ಮೂಲದ ಗರ್ಭಿಣಿ ಸಂಶಯಾಸ್ಪದ ಸಾವು: ಪ್ರಕರಣ ದಾಖಲು

Update: 2024-09-03 15:52 GMT

ಹೆಬ್ರಿ, ಸೆ.3: ಜಾರ್ಖಂಡ್ ಮೂಲದ ಗರ್ಭಿಣಿ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಜಾರ್ಖಂಡ್ ಮೂಲದ ಬಿಪಿನ್ ಒರಾನ್ ಎಂಬವರ ಪತ್ನಿ ಪ್ರಿಯಾಂಕ ಒರಾನ್(24) ಎಂದು ಗುರುತಿಸಲಾಗಿದೆ. ಇವರು ಹೆಬ್ರಿ ಗ್ರಾಮದ ಬಚ್ಚಪ್ಪು ನೆಕ್ಕರ್ಕೆ ಎಂಬಲ್ಲಿರುವ ಆ್ಯಂಟೋನಿ ಕೆ.ಎ. ಎಂಬವರ ತೋಟದ ಮನೆಯಲ್ಲಿನ ಪಕ್ಕದ ರೂಮಿನಲ್ಲಿ ವಾಸವಾಗಿದ್ದರು.

ಪ್ರಿಯಾಂಕ ಸುಮಾರು ಎರಡೂವರೆ ತಿಂಗಳ ಹಿಂದೆ ಇಲ್ಲಿಗೆ ಬಂದು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ ಗರ್ಬಿಣಿ ಯಾಗಿದ್ದಾರೆ. ಇಲ್ಲಿಗೆ ಹೊಸದಾಗಿ ಕೆಲಸಕ್ಕೆ ಬಂದ ಆಕೆಗೆ ಇಲ್ಲಿ ಇರಲು ಇಷ್ಟ ಇಲ್ಲ ಎನ್ನಲಾಗಿದೆ. ಇದೇ ವಿಚಾರದಲ್ಲಿ ಮಾನಸಿ ಕವಾಗಿ ನೊಂದಿದ್ದ ಆಕೆ ಸೆ.2ರಂದು ರಾತ್ರಿ ವೇಳೆ ಜೀವನದಲ್ಲಿ ಜಿಗುಪ್ಸೆಗೊಂಡು ತೋಟದ ಮನೆಯ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.

ಮೃತರ ಮರಣದ ಕಾರಣದ ಬಗ್ಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ಈ ಕುರಿತು ಸಂಶಯ ಇರುವುದಾಗಿ ರಾಬಿ ಒರಾನ್ ನೀಡಿದ ದೂರಿನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News