ಮನೆಯ ಲಾಕರ್‌ನಲ್ಲಿದ್ದ ಚಿನ್ನಾಭರಣ ಕಳವು

Update: 2023-09-09 15:48 GMT

ಉಡುಪಿ, ಸೆ.9: ಮಣಿಪಾಲದ ಮನೆಯೊಂದರ ಬೆಡ್‌ರೂಮಿನ ಲಾಕರ್‌ನಲ್ಲಿರಿಸಿದ್ದ ಒಟ್ಟು 29.5 ಲಕ್ಷ ರೂ. ಮೌಲ್ಯದ ಸೊತ್ತು ಗಳನ್ನು ಮನೆಯ ಕೆಲಸದಾಳುಗಳು ಕಳವು ಮಾಡಿಕೊಂಡು ಹೋಗಿರುವುದಾಗಿ ಮನೆಯ ಮಾಲಕಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಅರ್ಹತ್ ಎಂಬ ಮನೆಯಲ್ಲಿ ವಾಸವಾಗಿರುವ ರಕ್ಷಾ ವಿ.ಶೆಟ್ಟಿ ಅವರು ತಮ್ಮ ಮನೆಯ ಕೆಲಸದಾಳುಗಳಾದ ರಾಜು ಹಾಗೂ ಗೀತಾ ಅವರು ಸೊತ್ತುಗಳನ್ನು ಕದ್ದ ಬಗ್ಗೆ ದೂರು ನೀಡಿದ್ದಾರೆ.

ದೂರಿನಲ್ಲಿ ತಿಳಿಸಿದಂತೆ ಶುಕ್ರವಾರ ಬೆಳಗ್ಗೆ 10:10ರಿಂದ 11:20ರ ನಡುವಿನ ಅವಧಿಯಲ್ಲಿ ಮನೆಯ ಬೆಡ್‌ರೂಮಿನ ಎರಡು ಲಾಕರ್‌ಗಳಲ್ಲಿ ಇರಿಸಿದ್ದ 2 ಲಕ್ಷರೂ.ನಗದು, ಕೆಲವು ಜಾಗದ ದಾಖಲೆಗಳು, ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕೆಲಸದಾಳುಗಳಾದ ರಾಜು ಮತ್ತು ಗೀತಾ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನಾಭರಣ ಹಾಗೂ ವಜ್ರಾಭರಣಗಳ ಮೌಲ್ಯ 29.5 ಲಕ್ಷ ರೂ. ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News