ಉಡುಪಿ: ಸೆ.9ರಿಂದ ರಂಜನಿ ಸ್ಮಾರಕ ಸಂಗೀತೋತ್ಸವ

Update: 2023-09-07 16:13 GMT

ಉಡುಪಿ, ಸೆ.7: ಉದಯೋನ್ಮುಖ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿದ್ದು, ಸಣ್ಣ ಪ್ರಾಯದಲ್ಲಿ ನಿಧನರಾದ ರಂಜನಿ ಹೆಬ್ಬಾರ್ ನೆನಪಿನಲ್ಲಿ ಉಡುಪಿಯ ರಂಜಿನಿ ಸ್ಮಾರಕ ಟ್ರಸ್ಟ್ ಪ್ರತಿವರ್ಷ ಆಯೋಜಿಸು ತ್ತಿರುವ ರಂಜಿನಿ ಸ್ಮಾರಕ ಸಂಗೀತೋತ್ಸವ ಸೆ.9ರಿಂದ 17ರವರೆಗೆ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಸ್ಥಾಪಕ ಪ್ರೊ.ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.9ರ ಸಂಜೆ ಸಂಗೀತೋತ್ಸವ ಉದ್ಘಾಟನೆ ಗೊಳ್ಳಲಿದ್ದು, ಇದರೊಂದಿಗೆ ಟ್ರಸ್ಟ್‌ನ ವೆಬ್‌ಸೈಟ್ ಹಾಗೂ ತಾನು ಬರೆದ ‘ಸೌತ್ ಕೆನರಾದಲ್ಲಿ ಸಂಈತ ನಡೆದು ಬಂದ ದಾರಿ’ ಕೃತಿ ಅನಾವರಣಗೊಳ್ಳಲಿವೆ ಎಂದರು. ಬಳಿಕ 5:30ರಿಂದ ಅರ್ಚನಾ, ಸಮನ್ವಿ, ಶ್ರೀಮತಿದೇವಿ, ಗಾರ್ಗಿ, ಶುಭಾಂಗಿ ಹಾಗೂ ಶ್ರೀರಾಗ್ ಇವರಿಂದ ಪ್ರದರ್ಶನವಿರುತ್ತದೆ.

ಸೆ.10ರಂದು ಪ್ರಸಿದ್ಧ ಗಾಯಕಿ ರಂಜನಿ ಗಾಯತ್ರಿ ಇವರ ಕರ್ನಾಟಕ ಕಚೇರಿ ಇದ್ದರೆ, 11ರಂದು ನೌಶಾದ್ ಹಾಗೂ ನಿಶಾದ್ ಹರ್ಲಾಪುರ್ ಇವರಿಂದ ಹಿಂದೂಸ್ತಾನಿ ಗಾಯನವಿದೆ. 12ರಂದು ಅಮೃತ ಮುರಳಿ ಇವರಿಂದ ಕರ್ನಾಟಕ ಸಂಗೀತ, 13ರಂದು ಚೆನ್ನೈನ ವಿನಯ್ ವಾರಣಾಸಿ ಇವರು ಸಂಗೀತ ಸಂಕೀರ್ತನೆ ಮೂಲಕ ಕಥೆಗಳನ್ನು ಹೇಳಲಿದ್ದಾರೆ ಎಂದರು.

ಸೆ.14ರಂದು ಜೆಬಿ ಶ್ರುತಿಸಾಗರ್‌ರಿಂದ ಕೊಳಲುವಾದನ, 15ರಂದು ಮೈಸೂರು ನಾಗರಾಜ್ ಹಾಗೂ ಕಾರ್ತಿಕ್‌ರಿಂದ ದ್ವಂದ್ವ ವಯಲಿನ್ ವಾದನ, 16ರಂದು ಆದಿತ್ಯ ಮಾಧವ್‌ರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ. ಕೊನೆಯ ದಿನವಾದ ಸೆ.17ರಂದು ಬೆಳಗ್ಗೆ 10ರಿಂದ ಹಯಗ್ರೀವ ನಗರದ ಲತಾಂಗಿಯಲ್ಲಿ ಬೆಂಗಳೂರಿನ ಸ್ವಾಮಿ ಸೂರ್ಯಪದ ಇವರಿಂದ ಸತ್ಸಂಗ ಭಜನೆ ನಡೆಯಲಿದೆ.

ಸಂಜೆ 5:00ರಿಂದ ನೂತನ ರವೀಂದ್ರ ಮಂಟಪದಲ್ಲಿ ಶ್ರೇಯ ದೇವನಾಥ್ (ವಯೋಲಿನ್), ಎಂ.ಎಸ್.ಕಾರ್ತಿಕೇಯನ್ (ನಾಗಸ್ವರ), ಎಂ.ಎಸ್. ವೆಂಕಟಸುಬ್ರಹ್ಮಣ್ಯ(ಮೃದಂಗ) ಹಾಗೂ ಅಡ್ಯಾರ್ ಜಿ.ಸಿಲಬಂರಸನ್ (ತವಿಲ್) ಇವರಿಂದ ವಿಶಿಷ್ಟ, ಅಪರೂಪದ ವಾದ್ಯವೃಂದ ನಡೆಯಲಿದೆ ಎಂದು ಪ್ರೊ.ಹೆಬ್ಬಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ, ಖ್ಯಾತ ಶಾಸ್ತ್ರೀಯ ಸಂಗೀತ ಕಲಾವಿದೆ ಸಮನ್ವಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News