ಉಡುಪಿ: ಬಾಲಕರ ಭವನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಬಸ್ ನಿಲ್ದಾಣದಲ್ಲಿ ಪತ್ತೆ

Update: 2024-09-12 06:50 GMT

ಸಾಂದರ್ಭಿಕ ಚಿತ್ರ  PC: justdial.com

ಉಡುಪಿ, ಸೆ.12: ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬುಧವಾರ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ, ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ.

ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದು, ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕರ ಭವನದಿಂದ ಶಾಲೆಗೆಂದು ತೆರಳಿದ ಈತ, ಶಾಲೆಗೆ ಹೋಗದೆ, ಮರಳಿ ಬಾಲಕರ ಭವನಕ್ಕೂ ಬಾರದೆ ನಾಪತ್ತೆಯಾಗಿದ್ದನು.

ಬಾಲಕ ಕಾಣೆಯಾಗಿರುವ ಬಗ್ಗೆ ಬಾಲಕರ ಭವನದವರು ಪೋಲಿಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಬಾಲಕ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಲ್ಲಿ ಹಣ ಯಾಚಿಸುತ್ತಿದ್ದ ಸಂದರ್ಭ ಅನುಮಾನ ವ್ಯಕ್ತವಾಗಿದ್ದು, ಹಣ ಸಂಗ್ರಹಗೊಂಡ ಬಳಿಕ ಬಾಲಕನು ಬಸ್ಸಿನಲ್ಲಿ ಬೇರೆ ಊರಿಗೆ ಪಲಾಯನಗೈಯುವ ಉದ್ಧೇಶ ಹೊಂದಿದ್ದ ಎಂದು ತಿಳಿದು ಬಂದಿದೆ.

ಬಾಲಕನ ಅನುಮಾನಸ್ಪದ ಚಲನವಲನ ಗಮನಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಬಾಲಕನನ್ನು ವಶಕ್ಕೆ ಪಡೆದು, ಬಳಿಕ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಚಕ್ರತೀರ್ಥ, ಪ್ರಮೋದ್, ರಾಜೇಶ್ ಹಸ್ತಾಂತರ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News