ಉಡುಪಿ: ಆ.27ಕ್ಕೆ ಸಂಗೊಳ್ಳಿ ರಾಯಣ್ಣರ 227ನೇ ಉತ್ಸವ

Update: 2023-08-24 16:40 GMT

ಉಡುಪಿ, ಆ.24: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವತಿ ಯಿಂದ 227ನೇ ರಾಯಣ್ಣ ಉತ್ಸವವನ್ನು ಆ.27ರ ರವಿವಾರ ಉಡುಪಿಯಲ್ಲಿ ಆಚರಿಸಲಾಗುವುದು ಎಂದು ಅಧ್ಯಕ್ಷ ಸಿದ್ಧಬಸವಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಬನ್ನಂಜೆಯಲ್ಲಿರುವ ನಾರಾಯಣ ಗುರು ಸಭಾಭವನದಲಿ ರವಿವಾರ ಬೆಳಗ್ಗೆ 9:30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಬೈಲಹೊಂಗಲದ ದುರ್ಗಾ ದೇವಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮಹಾಂತಯ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟನೆ ಮಾಡಲಿರುವರು. ಬಾದಾಮಿ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿರುವರು ಎಂದರು.

ಉಡುಪಿಯ ಸಮಾಜ ಸೇವಕ ಈಶ್ವರ ಮಲ್ಪೆ ಅವರಿಗೆ 2023ನೇ ಸಾಲಿನ ರಾಯಣ್ಣ ಪುರಸ್ಕಾರ ನೀಡಿ ಗೌರವಿಸಲಾಗು ವುದು. ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ರಾಯಣ್ಣ ಪುರಸ್ಕಾರ ಪ್ರದಾನ ಮಾಡುವರು. ಅಧ್ಯಕ್ಷತೆಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದ.ಕ ಜಿಲ್ಲೆಯ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಹಿಸು ವರು. ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ 11:15ಕ್ಕೆ ಕುಂಭ ಮೇಳಕ್ಕೆ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಚಾಲನೆ ನೀಡುವರು. ಕುಂಭ ಮೆರವಣಿ ಬನ್ನಂಜೆಯ ನಾರಾಯಣ ಗುರು ಸಭಾಂಗಣದಿಂದ ರಥಬೀದಿಯ ಕನಕ ಗೋಪುರದವರೆಗೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು, ಗೌರವ ಸಲಹೆಗಾರ ಕೃಷ್ಣಶೆಟ್ಟಿ ಬೆಟ್ಟು, ಕಾರ್ಯಾಧ್ಯಕ್ಷ ಕುಮಾರ ಪ್ರಸಾದ್, ಉಪಾಧ್ಯಕ್ಷ ಲಕ್ಷ್ಮಣ್ ಕೋಲ್ಕಾರ್, ಕಾರ್ಯದರ್ಶಿ ವಿಠ್ಠಲ್ ಗೌಡರ್, ಖಜಾಂಜಿ ಪಂಪೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News