ಉಡುಪಿ: ಆ. 22 - 23ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

Update: 2023-08-19 14:07 GMT

ಉಡುಪಿ, ಆ.19: ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ರೇಚಕ ಸ್ಥಾವರದ ಎಚ್.ಟಿ ಪ್ಯಾನೆಲ್ ಮತ್ತು ಎಲ್.ಟಿ ಪ್ಯಾನೆಲ್‌ನ ಪರಿವರ್ತಕಗಳಿಗೆ ಯು.ಜಿ ಕೇಬಲ್, ಅರ್ಥ್‌ಲಿಂಗ್ ಮಾಡುವ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಆಗಸ್ಟ್ 22 ಮತ್ತು 23 ರಂದು ಉಡುಪಿ ನಗರಸಭಾ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹೀಗಾಗಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News