ಸೀಬರ್ಡ್ ನೌಕಾನೆಲೆಯ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ| ವಿಶ್ವೇಶ್ವರ ಹೆಗಡೆ ಕಾಗೇರಿ - ರಾಜನಾಥ್ ಸಿಂಗ್ ಭೇಟಿ

Update: 2024-11-26 16:34 GMT

ಭಟ್ಕಳ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ನವದೆಹಲಿಯಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು ಎಂದು ಸಂಸದರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಸೀಬರ್ಡ್ ಯೋಜನೆಯಡಿ ಭೂಮಿ ಕಳೆದುಕೊಂಡವರ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡಲು, ಮತ್ತು ಬಾಕಿ ಇರುವ ಇತರ ಸಮಸ್ಯೆಗಳ ಕಡತಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಮನವಿ ಮಾಡಿಕೊಂಡರು ಎನ್ನಲಾಗಿದ್ದು, ನೌಕಾ ನೆಲೆಯಿಂದ ಜೀವನೋಪಾಯ ಕಳೆದುಕೊಂಡ ಸ್ಥಳೀಯರು ಮತ್ತು ಭೂ ಕಳೆದು ಕೊಂಡವರಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ

ಅದೇ ರೀತಿಯಲ್ಲಿ, ಸೀಬರ್ಡ್ ನೌಕಾನೆಲೆಯಲ್ಲಿ ನಡೆಯುವ ಉದ್ಯೋಗ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲಿಯೇ ಸ್ಥಾಪಿಸಲು ವಿನಂತಿಸಿಕೊಂಡು, ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು.

ರಾಜನಾಥ್ ಸಿಂಗ್ ಅವರು ಈ ವಿಚಾರಕ್ಕೆ ಗಮನ ಹರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣದ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. "ಯಾವುದೇ ಸಮಸ್ಯೆ ಬರುವ ಸಂದರ್ಭದಲ್ಲಿ ತುರ್ತುಗತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News