ನ.21ರಿಂದ ಮೂರು ದಿನ ಮೀನುಗಾರಿಕಾ ಹಬ್ಬ: ಸಚಿವ ಮಂಕಾಳ್ ವೈದ್ಯ
ಭಟ್ಕಳ: ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ 21ರಿಂದ 23 ರ ವರೆಗೆ ಮೂರು ದಿನಗಳ ಕಾಲ ಮತ್ಸ್ಯ ಮೇಳ-2024 ಮುರುಡೇಶ್ವರದ ಆರ್.ಎನ್.ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್‌ನಲ್ಲಿ ಜರುಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು.
ಅವರು ಮಂಗಳವಾರ ಮುರುಡೇಶ್ವರದ ಆರ್.ಎನ್.ಎಸ್.ಗಾಲ್ಫ್ ಕ್ಲಬ್ ರೆಸಾರ್ಟ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಮೀನಿನ ಸಂಸತಿ, ಮೀನಿನ ಭಕ್ಷ್ಯ, ಮೀನು ತಂತ್ರಗಾರಿಕೆ ಕುರಿತಂತೆ ಅದ್ಯಯನ ಮಾಡುವವರಿಗೆ ಈ ಮೇಳ ಪ್ರಯೋಜನ ಕಾರಿಯಾಗಲಿದೆ. ವಿವಿಧ ಮೀನು ಸಂತತಿಯ ಕುರಿತಂತೆ ರಾಜ್ಯದ ಜನರಿಗೆ ಪರಿಚಯ ಮಾಡಿಕೊಡುವುದು ಈ ಮೇಳದ ಉದ್ದೇಶವಾಗಿದೆ. ರಾಜ್ಯದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಖ್ಯಾತ ಕಲಾವಿ ದರಿಂದ ಮನರಂಜನೆ ಕಾರ್ಯಕ್ರಮವೂ ನಡೆಯಲಿದೆ ಇದರು ಮೀನುಗಾರಿಕೆಯ ಹಬ್ಬವಾಗಿದ್ದು ಜಿಲ್ಲೆ ಹಾಗೂ ತಾಲೂಕಿನ ವಿದ್ಯಾರ್ಥಿಗಳು ಇದರ ಸದೂಪಯೋಗ ಪಡೆದುಕೊಳ್ಳಬೇಕು, ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭ ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕೆ. ಉಪಸ್ಥಿತರಿದ್ದರು.