ಭಟ್ಕಳ: ಹಣ್ಣಿನ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು
ಭಟ್ಕಳ: ಹಣ್ಣಿನ ಅಂಗಡಿಯ ಮಾಲಕನ ಮೇಲಿನ ದ್ವೇಷದಿಂದ ಹಣ್ಣಿನ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿರುವ ಘಟನೆ ಭಟ್ಕಳ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಗುರುವಾರ ಮುಂಜಾನೆ 2.30 ಸುಮಾರಿಗೆ ನಡೆದಿದೆ.
ಮಾವಿನ ಕುರ್ವೆ ಪಂಚಾಯತ್ ವ್ಯಾಪ್ತಿಯ ತಲಗೋಡ ಕೋಟೆಮನೆ ರಾಮಚಂದ್ರ ಜಟ್ಟಪ್ಪ ನಾಯ್ಕ ಇವರಿಗೆ ಸೇರಿದ ಹಣ್ಣಿನ ಅಂಗಡಿ ಇದಾಗಿದೆ. ಇವರು ಇಲ್ಲಿನ ತಾಲೂಕು ಪಂಚಾಯತ್ ಮುಂಭಾಗದಲ್ಲಿ ತಾತ್ಕಾಲಿಕ ಹೆಣ್ಣಿನ ಅಂಗಡಿಗೆ ನಿರ್ಮಿಸಿ ಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಇವರ ಮೇಲಿನ ದ್ವೇಷದಿಂದಾಗಿ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವುದರಿಂದ ಹಣ್ಣಿನ ಅಂಗಡಿ ಹಾಗೂ ಅಂಗಡಿಯಲ್ಲಿದ್ದ ಇತರೆ ಸಾಮಾನುಗಳು ಸೇರಿ ಒಟ್ಟು 7 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿದೆ. ಅದೇ ರೀತಿ ನನ್ನ ಅಂಗಡಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವ ಬಗ್ಗೆ ಸಂಶಯವಿದೆ ಈ ಬಗ್ಗೆ ತನಿಖೆ ಮಾಡುವಂತೆ ಪ್ರಕರಣ ನೀಡಿದ್ದಾರೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿಹಣ್ಣಿನ ಅಂಗಡಿಯ ಮಾಲೀಕ ರಾಮಚಂದ್ರ ನಾಯ್ಕ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ.