ಭೂಕಬಳಿಕೆ ನಿಷೇಧ ಕಾಯಿದೆ: ಅರಣ್ಯ ಭೂಮಿ ಹಕ್ಕು ಹೋರಾಟಗಾರರಿಂದ ಸಡಲಿಕೆಗೆ ಆಗ್ರಹ

Update: 2024-12-18 13:21 GMT

ಭಟ್ಕಳ: ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದ ಸರ್ಕಾರಿ ಭೂಮಿಯ ಅತಿಕ್ರಮಣಕ್ಕೆ ಕಾನೂನು ಬಾಹಿರವಾಗಿ ಪರಿಗಣನೆ ಮಾಡಿ 3 ವರ್ಷ ಜೈಲು ಮತ್ತು ರೂ.25000 ದಂಡ ವಿಧಿಸುವ ಕಠಿಣ ಅಂಶವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಪ್ರಶ್ನಿಸಿ, ಕಾಯಿದೆ ಸಡಲಿಕೆಗೆ ಆಗ್ರಹಿಸಿದ್ದಾರೆ.

ಡಿ. 17ರಂದು ಭಟ್ಕಳದಲ್ಲಿ ಅರಣ್ಯವಾಸಿಗಳಿಗೆ ಗ್ರೀನ್ ಕಾರ್ಡು ವಿತರಣೆ ಮಾಡಿದ ವೇಳೆ ಅವರು ಈ ವಿಷಯವನ್ನು ಬೆಳಕಿಗೆ ತಂದು, ನಗರ ಪಾಲಿಕೆ, ಪುರಸಭೆ, ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯೊಳಗಿನ ಸರಕಾರಿ ಭೂಮಿಯ ಅತಿಕ್ರಮಣವು ಕ್ರಿಮಿನಲ್ ಪ್ರಕರಣಕ್ಕೆ ಕಾರಣವಾಗುವುದಾಗಿ ಕಾನೂನಿನಲ್ಲಿ ಉಲ್ಲೇಖಿಸಿರುವುದರಿಂದ ಕಾಯಿದೆ ಪುನರ್ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಸಾಬ್ ಭಟ್ಕಳ, ಚಂದ್ರು ನಾಯ್ಕ ಗೊರಟೆ, ದಯಾನಂದ ಹಸರವಳ್ಳಿ, ನಾಗರಾಜ ಹಸರವಳ್ಳಿ, ಸಂತೋಷ ಗೊರಟೆ, ಅಬ್ದುಲ್ ಕಯ್ಯುಮ್ ಕೋಲಾ ಭಟ್ಕಳ, ರತ್ನಾ ಬೆಳಕೆ, ಮಾದೇವಿ ಕರಿಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News