ರಾಧಾಕೃಷ್ಣ ಭಟ್ಟರಿಗೆ 'ಪ್ರತಿಬಿಂಬ-ಸನ್ಮಾನ'
Update: 2024-12-07 17:26 GMT
ಭಟ್ಕಳ: ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಅವರನ್ನು ಡಿ. 8ರಂದು ಹೊನ್ನಾವರದಲ್ಲಿ ಅಖಿಲ ಹವ್ಯಕ ಮಹಾಸಭಾ ಆಯೋಜಿಸಿರುವ 'ಪ್ರತಿಬಿಂಬ-ಸನ್ಮಾನ' ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ.
1989ರಿಂದ ಪತ್ರಕರ್ತರಾಗಿರುವ ಭಟ್ಟ ಅವರು ಭಟ್ಕಳ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ, ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ಪಡೆದ ಅವರು ಸಮಾಜಮುಖಿ ಪತ್ರಿಕೋದ್ಯಮಕ್ಕಾಗಿ ಚಿರಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.