ಹೊಸಪೇಟೆ: ಹುಚ್ಚುನಾಯಿ ಕಡಿತ; ಮಗುವಿಗೆ ಗಂಭೀರ ಗಾಯ
Update: 2024-09-17 07:56 GMT
ವಿಜಯನಗರ : ಹುಚ್ಚುನಾಯಿಯೊಂದು 3 ವರ್ಷದ ಮಗುವಿಗೆ ಕಚ್ಚಿದ್ದರಿಂದ ಮಗುವಿಗೆ ಗಂಭೀರ ಗಾಯವಾದಂತಹ ಘಟನೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ.
ರಾಮ ಹಾಗೂ ಲೋಕಮ್ಮ ಅವರ ಮಗಳು ಜನನಿ(3) ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಮುಖದ ಭಾಗದಲ್ಲಿ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.