ಹೊಸಪೇಟೆ | ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಒಳ ಮೀಸಲಾತಿ ಅಗತ್ಯ : ಸೋಮಶೇಖರ್ ಬಣ್ಣದಮನೆ

ಹೊಸಪೇಟೆ : ವಿಜಯನಗರ ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಒಳ ಮೀಸಲಾತಿ ಬೇಕೇ ಬೇಕು. ರಾಜ್ಯ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸದೆ ಅತ್ಯಂತ ತೊರಿತಗತಿಯಲ್ಲಿ ಪರಿಶಿಷ್ಟರ ಜಾತಿ ಗಣತಿ ಮಾಡಿ ಯಾವ ಸಮುದಾಯಕ್ಕೂ ಅನ್ಯಾಯವಾಗದೆ ಸಂಖ್ಯೆಗನುಗುಣವಾಗಿ ಮೀಸಲಾತಿ ಜಾರಿ ಮಾಡಬೇಕು ಎಂದು ಸೋಮಶೇಖರ್ ಬಣ್ಣದಮನೆ ತಿಳಿಸಿದ್ದಾರೆ.
ಇಂದು ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ವಿಜಯನರ ಜಿಲ್ಲೆ ಛಲವಾದಿ ಮಹಾಸಭದ ಜಿಲ್ಲಾ ಸಮಿತಿ ವಿಸ್ರುತ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಛಲವಾದಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ ಹಿರಿಯರದ ಗುಂಡಗತ್ತಿ ಕೊಟ್ರಪ್ಪ, ಜಿಲ್ಲಾ ಖಜಾಂಚಿಗಳಾದ ಜೆಸಿ ಈರಣ್ಣ, ಸಣ್ಣ ಈರಪ್ಪ, ರಾಮಚಂದ್ರ ಬಾಬು, ಮರಿಸ್ವಾಮಿ, ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮಾರಪ್ಪ, ನಿವೃತ್ತ ಶಿಕ್ಷಕರಾದ ಚಂದ್ರಶೇಖರ, ಪ್ರಭಾಕರ್, ಛಲವಾದಿ ಕೇರಿ ಮುಖಂಡರಾದ ಮುದುಕಪ್ಪ, ರಾಮಕೃಷ್ಣ, ಟಿ ಬಿ ಡ್ಯಾಮ್ ರಮೇಶ್, ಶಿಕ್ಷಕರಾದ ಸುಗ್ಗನಳ್ಳಿ ರಮೇಶ್, ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್, ಹರಪನಹಳ್ಳಿಯ ಸಿ.ಅಜ್ಜಯ, ಕೊಟ್ರೇಶ್, ಹಗರಿಬೊಮ್ಮನಹಳ್ಳಿಯ ಪ್ರಕಾಶ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.