ವಿಜಯನಗರ | ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದರೆ ಉಜ್ವಲ ಭವಿಷ್ಯ ರೂಪಿಸಬಹುದು : ನ್ಯಾ.ಅಬ್ದುಲ್ ರಹೀಮಾನ್

Update: 2025-04-15 20:18 IST
Photo of Program
  • whatsapp icon

ವಿಜಯನಗರ (ಹೊಸಪೇಟೆ) : ಮಾದಕ ವಸ್ತುಗಳ ಬಳಕೆ ವೈರಸ್ ಇದ್ದಂತೆ ಒಂದು ಬಾರಿ ಸೋಂಕಿತರಾದರೇ ಗುಣಮುಖರಾಗುವುದು ಕಷ್ಟ ಸಾಧ್ಯ. ಯುವಜನತೆ ಇವುಗಳಿಂದ ದೂರವಿದ್ದರೆ ಉಜ್ವಲ ಭವಿಷ್ಯ ರೂಪಿಸಬಹುದು ಎಂದು ಜಿಲ್ಲಾ ನ್ಯಾಯಧೀಶರಾದ ಅಬ್ದುಲ್ ರಹೀಮಾನ್ ಎ.ನಂದಗಡಿ ಹೇಳಿದರು.

ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನುಗಳ ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯನಗರ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಹಾಗೂ ಎನ್‌ಡಿಪಿಎಸ್ ಕಾಯ್ದೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯುವಜನತೆಯಲ್ಲಿ ಮಾದಕ ವಸ್ತುಗಳ ವ್ಯಾಮೋಹ ಹೆಚ್ಚಾಗಿದ್ದು, ಅದರ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಾಮಾಜಿಕ ಜವಾಬ್ದಾರಿಯಿಂದ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ ಎಂದರು.

ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಲ್.ಶ್ರೀಹರಿಬಾಬು, ಡಾ.ಸೋಮಶೇಖರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷರಾದ ಮೆಟ್ರಿ ಮಲ್ಲಿಕಾರ್ಜುನ, ಹಿರಿಯ ನ್ಯಾಯಾಧೀಶರಾದ ಹೇಮಲತಾ.ಬಿ.ಹುಲ್ಲೂರು, ಬಿ.ಎನ್.ರಮೇಶ್‌ಬಾಬು ಜೆ.ಚೈತ್ರ, ಶೃತಿ ತೇಲಿ, ವಕೀಲರ ಸಂಘದ ಅಧ್ಯಕ್ಷ ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ವಿಜಯನಗರ ಮಹಾವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾದ ಗುಡೇಕೋಟೆ ನಾಗರಾಜ, ನಟರಾಜ ಅಕ್ಕಿ, ಪ್ರಾಚಾರ್ಯರಾದ ಪ್ರಭುಗೌಡ ಸೇರಿದಂತೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News