ವಿಜಯನಗರ | ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯ, ನೈಪುಣ್ಯತೆ ಅಗತ್ಯ : ಅಂಜನ್ ಕುಮಾರ್

Update: 2025-04-15 20:13 IST
Photo of Program
  • whatsapp icon

ವಿಜಯನಗರ(ಹೊಸಪೇಟೆ) : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಕೋರ್ಸ್‌ಗಳ ಅಧ್ಯಯನ ಮಾಡುವುದರಿಂದ ಕೌಶಲ್ಯ ಮತ್ತು ನೈಪುಣ್ಯತೆ ವೃದ್ಧಿಯಾಗಲಿದೆ ಎಂದು ಜಿಟಿಟಿಸಿ ಕಾಲೇಜು ಪ್ರಾಚಾರ್ಯರಾದ ಡಿ.ಅಂಜನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಏರ್ಪಡಿಸಿದ್ದ ಎಸೆಸೆಲ್ಸಿ ನಂತರ ಮುಂದೇನು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

1972ರಲ್ಲಿ ಡೆನ್ಮಾರ್ಕ್ ಸರ್ಕಾರ ಮತ್ತು ಭಾರತ ಸರ್ಕಾರದ ಸಹಯೋಗದೊಂದಿಗೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆಯಾಯಿತು. ಹೊಸಪೇಟೆ ಕೇಂದ್ರವು 1996 ರಲ್ಲಿ ಸ್ಥಾಪನೆಯಾಗಿ ಪ್ರಸ್ತುತ ಮರಿಯಮ್ಮನಹಳ್ಳಿ ಸುವ್ಯವಸ್ಥಿತ ತಾಂತ್ರಿಕ ಅಧ್ಯಯನ ಮತ್ತು ಉತ್ತಮ ಬೋಧನೆಯನ್ನು ನಡೆಸಲಾಗುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಅಕ್ಕಿ ಬಸವರಾಜ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ವಿ.ಎಂ.ಗವಿಸಿದ್ದೇಶ್ ಮಾತನಾಡಿದರು.

ಈ ವೇಳೆ ಜಿಟಿಟಿಸಿ ಕೇಂದ್ರದ ಉಪನ್ಯಾಸಕ ಟಿ.ಮಂಜುನಾಥ, ತೇಜಕುಮಾರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News