ಅನುತ್ಪಾದಕರ ಆಸ್ತಿ ಪ್ರಮಾಣ 52,250.47 ಕೋಟಿ ರೂ.

Update: 2023-08-27 11:21 IST
ಅನುತ್ಪಾದಕರ ಆಸ್ತಿ ಪ್ರಮಾಣ 52,250.47 ಕೋಟಿ ರೂ.
  • whatsapp icon

ಬೆಂಗಳೂರು: ಕೃಷಿ, ಸಣ್ಣ ಉದ್ಯಮ, ವಸತಿ, ಶಿಕ್ಷಣ ಸೇರಿದಂತೆ ಇನ್ನಿತರ ವಲಯಗಳಲ್ಲಿ ರಾಜ್ಯದಲ್ಲಿ 2023ರ ಜೂನ್ 30ರ ಅಂತ್ಯದಲ್ಲಿದ್ದ 10,49,110.64 ಕೋಟಿ ರೂ. ಸಾಲ ನೀಡಲಾಗಿದ್ದು, ಈ ಪೈಕಿ ಅನುತ್ಪಾದಕ ಆಸ್ತಿ ಪ್ರಮಾಣವು ಒಟ್ಟಾರೆ 52,250.47 ಕೋಟಿ ರೂ. ನಷ್ಟಿದೆ ಎಂಬುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯು 2023ರ ಆಗಸ್ಟ್ 11ರಂದು ನಡೆಸಿದ 162ನೇ ಸಭೆಯಲ್ಲಿ 2023ರ ಜೂನ್ 30ರ ಅಂತ್ಯಕ್ಕೆ ವಿವಿಧ ವಲಯಗಳಲ್ಲಿನ ಅನುತ್ಪಾದಕ ಆಸ್ತಿ ಪ್ರಮಾಣದ ಅಂಕಿ ಅಂಶಗಳನ್ನು ಮಂಡಿಸಲಾಗಿದೆ. ಇದರ ಅಂಕಿ ಅಂಶಗಳು ‘the-file.in’ಗೆ ಲಭ್ಯವಾಗಿವೆ.

ಕೇವಲ ನಾಲ್ಕೇ ನಾಲ್ಕು ತಿಂಗಳ ಅವಧಿಯಲ್ಲಿ 3,532.30 ಕೋಟಿ ರೂ.ನಷ್ಟು ಎನ್‌ಪಿಎ ಮೊತ್ತದಲ್ಲಿ ಹೆಚ್ಚಳವಾಗಿದೆ. ಅಂದರೆ 2023ರ ಮಾರ್ಚ್ 31ರ ಅಂತ್ಯಕ್ಕೆ ಕೃಷಿ ಸೇರಿದಂತೆ ಒಟ್ಟಾರೆ 6 ವಲಯಗಳಲ್ಲಿ 48, 718.17 ಕೋಟಿ ರೂ.ನಷ್ಟು ಎನ್‌ಪಿಎ ಇದ್ದರೇ 2023ರ ಜೂನ್ 30ರ ಅಂತ್ಯಕ್ಕೆ 52,520.47 ಕೋಟಿ ರೂ.ಗೆ ಏರಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಸಹಕಾರಿ ವಲಯ ಬ್ಯಾಂಂಕ್ ಎನ್‌ಪಿಎ ವಿವರ

 ಕಸ್ಕಾರ್ಡ್ - 1,840.10 ಕೋಟಿ ರೂ., ಅಪೆಕ್ಸ್ ಬ್ಯಾಂಕ್ - 1,480.28 ಕೋಟಿ ರೂ. ಇತ್ತು

ಕೃಷಿ ವಲಯ ಸೇರಿದಂತೆ ಒಟ್ಟಾರೆ 6 ವಲಯಗಳಿಗೆ 6 ವಲಯಗಳ ಪೈಕಿ ಕೃಷಿ ವಲಯದಲ್ಲಿಯೇ ಅತಿ ಹೆಚ್ಚು ಎಂದರೆ ಜೂನ್ 30ರ ಅಂತ್ಯಕ್ಕೆ 18,964.73 ಕೋಟಿ ರೂ.ನಷ್ಟು ಎನ್‌ಪಿಎ ಇದೆ. 2023ರ ಮಾರ್ಚ್ 30ರ ಅಂತ್ಯದಲ್ಲಿ ಇದೇ ವಲಯವು 18,608.67 ಕೋಟಿ ರೂ.ನಷ್ಟು ಎನ್‌ಪಿಎ ಹೊಂದಿತ್ತು. ನಾಲ್ಕು ತಿಂಗಳಲ್ಲಿ ಈ ವಲಯದಲ್ಲಿ 355.93 ಕೋಟಿ ರೂ.ಗೇರಿದೆ. ಕೋವಿಡ್ ವರ್ಷದಲ್ಲಿ ಕೃಷಿ ವಲಯದಲ್ಲಿ 2020ರ ಡಿಸೆಂಬರ್ ಅಂತ್ಯದಲ್ಲಿ 18,111.58 ಕೋಟಿ ರೂ.,2021ರ ಮಾರ್ಚ್ ಅಂತ್ಯಕ್ಕೆ 21,773.89 ಕೋಟಿ ರೂ. ಇತ್ತು. 2021ಕ್ಕೆ ಹೋಲಿಸಿದರೆ ಕೃಷಿ ವಲಯದ ಎನ್‌ಪಿಎ ಪ್ರಮಾಣ 2,809.29 ಕೋಟಿ ರೂ. ನಷ್ಟು ಇಳಿಕೆಯಾಗಿದೆ.


ಸಣ್ಣ ಹಣಕಾಸಿನ ಸಂಸ್ಥೆಗಳ ಎನ್‌ಪಿಎ ವಿವರ 

ಈಕ್ವಟಾಸ್ ಸ್ಮಾಲ್ ಫೈನಾನ್ಸ್ - 7.49 ಕೋಟಿ ರೂ., ಉಜ್ಜೀವನ್ ಸ್ಮಾಲ್ ಫೈನಾನ್ಸ್ - 10.73 ಕೋಟಿ ರೂ., ಸೂರ್ಯೋದಯ ಸ್ಮಾಲ್ ಫೈನಾನ್ಸ್ - 5.85 ಕೋಟಿ ರೂ., ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ - 11.53 ಕೋಟಿ ರೂ. ಎನ್‌ಪಿಎ ಇತ್ತು.

ಎಂಎಸ್‌ಎಂಇ ವಲಯದಲ್ಲಿ ಎನ್‌ಪಿಎ ಪ್ರಮಾಣವು 2023ರ ಜೂನ್ ಅಂತ್ಯಕ್ಕೆ 11,251.17 ಕೋಟಿ ರೂ., ಇದೆ. 2023ರ ಮಾರ್ಚ್ 31ಕ್ಕೆ ಹೋಲಿಸಿದರೆ ಈ ವಲಯದಲ್ಲಿ 344.53 ಕೋಟಿ ರೂ.(10,906.64 ಕೋಟಿ ರೂ.) ಹೆಚ್ಚಳವಾಗಿದೆ. ವಸತಿ ವಲಯದಲ್ಲಿ 2023ರ ಜೂನ್ ಅಂತ್ಯಕ್ಕೆ 540.78 ಕೋಟಿ ರೂ., ಶಿಕ್ಷಣ ವಲಯದಲ್ಲಿ 446.24 ಕೋಟಿ ರೂ., ಇತರ ಆದ್ಯತೆ ವಲಯದಲ್ಲಿ 944.44 ಕೋಟಿ ರೂ., ಆದ್ಯತೇತರ ವಲಯದಲ್ಲಿ 20,029.61 ಕೋಟಿ ರೂ. ಎನ್‌ಪಿಎ ಇದೆ. ಈ ವಲಯದಲ್ಲಿ 2023ರ ಮಾರ್ಚ್ 31ರ ಅಂತ್ಯಕ್ಕೆ 17,223.98 ಕೋಟಿ ರೂ.ನಷ್ಟು ಎನ್‌ಪಿಎ ಇತ್ತು. ನಾಲ್ಕೇ ನಾಲ್ಕು ತಿಂಗಳಲ್ಲಿ 2,805.63 ಕೋಟಿ ರೂ.ನಷ್ಟು ಏರಿಕೆಯಾಗಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಕೃಷಿ ವಲಯಕ್ಕೆ ಜೂನ್ 30ರ ಅಂತ್ಯಕ್ಕೆ 1,95,179.73 ಕೋಟಿ ರೂ., ಎಂಎಸ್‌ಎಂಇ ವಲಯಕ್ಕೆ 1,46,636.14 ಕೋಟಿ ರೂ., ವಸತಿ ವಲಯಕ್ಕೆ 36,349.44 ಕೋಟಿ ರೂ., ಶಿಕ್ಷಣಕ್ಕೆ 6,019.20 ಕೋಟಿ ರೂ., ಇತರ ಆದ್ಯತೆ ವಲಯಗಳಿಗೆ 11,571.83 ಕೋಟಿ ರೂ., ಆದ್ಯತೇತರ ವಲಯಕ್ಕೆ 6,52,018.49 ಕೋಟಿ ರೂ. ಸಾಲ ನೀಡಲಾಗಿತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕೃಷಿ ವಲಯ (ಬ್ಯಾಂಕ್‌ವಾರು) ಎನ್‌ಪಿಎ ವಿವರ

ಕೆನರಾ ಬ್ಯಾಂಕ್ - 6,503.63 ಕೋಟಿ ರೂ., ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ 3,223.42 ಕೋಟಿ ರೂ., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- 895.44 ಕೋಟಿ ರೂ., ಬ್ಯಾಂಕ್ ಆಫ್ ಬರೋಡ - 681.90 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ - 359.38 ಕೋಟಿ ರೂ., ಬ್ಯಾಂಕ್ ಅಫ್ ಮಹಾರಾಷ್ಟ್ರ - 76.42 ಕೋಟಿ ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- 95.01 ಕೋಟಿ ರೂ., ಇಂಡಿಯನ್ ಬ್ಯಾಂಕ್- 31.54 ಕೋಟಿ ರೂ.,ಇಂಡಿಯನ್ ಓವರ್ಸೀಸ್

ಬ್ಯಾಂಕ್- 170.86 ಕೋಟಿ ರೂ., ಪಂಜಾಬ್ ನ್ಯಾಷನಲ್ ಬ್ಯಾಂಕ್- 149.72 ಕೋಟಿ ರೂ., ಪಂಜಾಬ್ ಸಿಂಡ್ ಬ್ಯಾಂಕ್ - 0.85 ಕೋಟಿ ರೂ., ಯುಕೋ ಬ್ಯಾಂಕ್ - 52.90 ಕೋಟಿ ರೂ. ಎನ್‌ಪಿಎ ಇತ್ತು.

ಕೋವಿಡ್ ಎರಡನೇ ಅಲೆ ಆರಂಭವಾಗಿದ್ದ (2021ರ ಮಾರ್ಚ್ ಅಂತ್ಯಕ್ಕೆ) ಹೊತ್ತಿನಲ್ಲೇ ರಾಜ್ಯದಲ್ಲಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವು 54,756.47 ಕೋಟಿ ರೂ. ನಷ್ಟಿತ್ತು. ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ ಲಾಕ್‌ಡೌನ್‌ನಿಂದಾಗಿ ಉದ್ಭವಿಸಿದ ಆರ್ಥಿಕ ವಲಯದಲ್ಲಿನ ಬಿಕ್ಕಟ್ಟು, ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

2020ರ ಡಿಸೆಂಬರ್ 31ರ ಅಂತ್ಯಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣವು 48,722.17 ಕೋಟಿ ರೂ.ನಷ್ಟಿತ್ತು. 2021ರ ಮಾರ್ಚ್ 31ರ ಅಂತ್ಯಕ್ಕೆ 54,756.47 ಕೋಟಿ ರೂಪಾಯಿಗಳಷ್ಟಾಗಿದೆ. ಕೇವಲ ಮೂರೇ ಮೂರು ತಿಂಗಳಲ್ಲಿ 6,0343.3 ಕೋಟಿ ರೂ.ನಷ್ಟು ಹೆಚ್ಚಳ ಕಂಡಿತ್ತು. ಕೃಷಿ, ಸಣ್ಣ, ಸೂಕ್ಷ್ಮ್ಮ ಮತ್ತು ಮಧ್ಯಮ ವಲಯದ ಕೈಗಾರಿಕೆ, ವಸತಿ, ಶಿಕ್ಷಣ, ಇತರ ಆದ್ಯತೆ ಮತ್ತು ಆದ್ಯತೆಯೇತರ ವಲಯದಲ್ಲಿ ಒಟ್ಟು (29,482,05 ಖಾತೆಗಳು) 54,756.46 ಕೋಟಿ ರೂ.ಗಳಷ್ಟು ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ 21,773.89 ಕೋಟಿ ರೂ.ಎನ್‌ಪಿಎ ಇತ್ತು.

ಖಾಸಗಿ ಬ್ಯಾಂಕ್‌ ಗಳಲ್ಲಿನ ಎನ್‌ಪಿಎ ವಿವರ

ಐಡಿಬಿಐ- 65.43 ಕೋಟಿ ರೂ., ಕರ್ನಾಟಕ ಬ್ಯಾಂಕ್- 303.13 ಕೋಟಿ ರೂ., ಕೋಟಕ್ ಮಹೀಂದ್ರಾ - 17.43 ಕೋಟಿ ರೂ., ಕ್ಯಾಥರಿಕ್ ಸಿರಿಯನ್ ಬ್ಯಾಂಕ್ - 161.53 ಕೋಟಿ ರೂ., ಸಿಟಿ ಯೂನಿಯನ್ ಬ್ಯಾಂಕ್ - 3.69 ಕೋಟಿ ರೂ., ಧನಲಕ್ಷ್ಮಿ ಬ್ಯಾಂಕ್ - 0.08 ಕೋಟಿ ರೂ., ಫೆಡರಲ್ ಬ್ಯಾಂಕ್ - 34.03 ಕೋಟಿ ರೂ., ಜೆ ಆ್ಯಂಡ್ ಕೆ ಬ್ಯಾಂಕ್- 8.27 ಕೋಟಿ ರೂ., ಕರೂರ್ ವೈಶ್ಯ ಬ್ಯಾಂಕ್ - 17.86 ಕೋಟಿ ರೂ., ಲಕ್ಷ್ಮಿವಿಲಾಸ್ ಬ್ಯಾಂಕ್ - 160.01 ಕೋಟಿ ರೂ., ರತ್ನಾಕರ್ ಬ್ಯಾಂಕ್- 232.78 ಕೋಟಿ ರೂ., ಸೌತ್ ಇಂಡಿಯನ್ ಬ್ಯಾಂಕ್ - 13.58 ಕೋಟಿ ರೂ., ಇಂಡಸ್ಲಡ್ ಬ್ಯಾಂಕ್- 96.33 ಕೋಟಿ ರೂ., ಎಚ್‌ಡಿಎಫ್‌ಸಿ - 195.72 ಕೋಟಿ ರೂ., ಆಕ್ಸಿಸ್ - 60.00 ಕೋಟಿ ರೂ., ಐಸಿಐಸಿಐ - 78 ಕೋಟಿ ರೂ., ಯೆಸ್ ಬ್ಯಾಂಕ್ - 488.32 ಕೋಟಿ ರೂ., ಬಂಧನ್ ಬ್ಯಾಂಕ್ - 1.97 ಕೋಟಿ ರೂ., ಡಿಸಿಬಿ ಬ್ಯಾಂಕ್ - 8.63 ಕೋಟಿ ರೂ., ಐಡಿಎಫ್‌ಸಿ - 930.57 ಕೋಟಿ ರೂ. ಎನ್‌ಪಿಎ ಇತ್ತು.

ಅದೇ ರೀತಿ 2021ರ ಮಾರ್ಚ್ ಅಂತ್ಯಕ್ಕೆ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ವಲಯದಲ್ಲಿ (ಎಂಎಸ್‌ಎಂಇ) 11,652.59 ಕೋಟಿ ರೂ., ವಸತಿ ವಲಯದಲ್ಲಿ 1,682.88 ಕೋಟಿ ರೂ., ಶಿಕ್ಷಣ ವಲಯದಲ್ಲಿ 510.02 ಕೋಟಿ ರೂ., ಇತರ ಆದ್ಯತೆ ವಲಯದಲ್ಲಿ 4,293.99 ಕೋಟಿ ರೂ., ಆದ್ಯತೆಯೇತರ ವಲಯದಲ್ಲಿ 14,843.1 ಕೋಟಿ ರೂ.ಗಳಷ್ಟು ಎನ್‌ಪಿಎ ಇತ್ತು.

ಕಳೆದ ವರ್ಷಕ್ಕೆ (2020) ಹೋಲಿಸಿದರೆ ಕೃಷಿ ವಲಯದಲ್ಲಿ ಎನ್‌ಪಿಎ ಪ್ರಮಾಣ (18,111.58 ಕೋಟಿ ರೂ.), ಒಂದು ವರ್ಷದಲ್ಲಿ 3,662.31 ಕೋಟಿ ರೂ.ಹೆಚ್ಚಳವಾಗಿದೆ. ಎಂಎಸ್‌ಎಂಇ ವಲಯದಲ್ಲಿ (8,425.96 ಕೋಟಿ ರೂ.), 3,226.63 ಕೋಟಿ ರೂ., ವಸತಿ ವಲಯದಲ್ಲಿ (1,208.35 ಕೋಟಿ ರೂ.) 474.53 ಕೋಟಿ ರೂ., ಶಿಕ್ಷಣದಲ್ಲಿ (498.49 ಕೋಟಿ ರೂ.)11.53 ಕೋಟಿ ರೂ., ಇತರ ವಲಯದಲ್ಲಿ (6,351.92 ಕೋಟಿ ರೂ.) 2,057.93 ಕೋಟಿ ರೂ., ಆದ್ಯತೆಯೇತರ ವಲಯದಲ್ಲಿ (14,125.87 ಕೋಟಿ ರೂ.) 713.23 ಕೋಟಿ ರೂ. ಸೇರಿದಂತೆ ಒಟ್ಟು 6,03,04.3 ಕೋಟಿ ರೂ. ಹೆಚ್ಚಳವಾಗಿತ್ತು. ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾಗಿರುವುದರಿಂದ ಬ್ಯಾಂಕ್‌ಗಳ ದೈನಂದಿನ ಹಣಕಾಸಿನ ವಹಿವಾಟಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಜಂಟಿಯಾಗಿ ಸಾಲ ವಸೂಲಾತಿ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News