ಸರ್ಕಾರ ಸಿವಿಲ್ ಗುತ್ತಿಗೆದಾರರ ಪರವಾಗಿದೆ: ಸುದರ್ಶನ ನಾಯಕ

ಯಾದಗಿರಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಡಿರುವ ಆರೋಪ ಸುಳ್ಳು ಇದೆ ಅವರು ಗುತ್ತಿಗೆದಾರರ ಸಭೆ ಕರೆಯದೆ ಏಕಾಏಕಿ ನಿರ್ದಾರ ತೆಗೆದುಕೊಂಡಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘದ ಜಿಲ್ಲಾ ಅಧ್ಯಕ್ಷ ಸುದರ್ಶನ ನಾಯಕ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆಯ ಗುತ್ತಿಗೆದಾರರ ಪರವಾಗಿ ನಾನು ಈ ಮೂಲಕ ಸ್ಪಷ್ಟೀಕರಣ ನೀಡುವುದೆನೆಂದರೆ ಕರ್ನಾಟಕ ಸರ್ಕಾರ ಗುತ್ತಿಗೆದಾರಾರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದೇ ಹಂತ ಹಂತವಾಗಿ ಬಿಲ್ಲುಗಳು ನೀಡುತ್ತಿದ್ದಾರೆ ಆದರೆ ನಮ್ಮ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಅದ್ಯಕ್ಷರಿಗೆ ಸಂಪೂರ್ಣ ಮಾಹಿತಿ ಇಲ್ಲದೆ ಸುಮ್ಮನೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಅವರು ಮಾಡಿದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೋಳಿಯವರು, ಅಧಿಕಾರ ವಹಿಸಿಕೊಂಡ ಬಳಿಕ, ಇಲ್ಲಿಯವರೆಗೂ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಪ್ರಥಮ ಆದ್ಯತೆ ಮೇರೆಗೆ ಸ್ವತಃ ಮುತುವರ್ಜಿ ವಹಿಸಿ ಬಿಲ್ ಪಾವತಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಸಚಿವರು ಯಾವ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಭೆ ಕರೆಯದೆ ಗುತ್ತಿಗೆದಾರರ ಸಮಸ್ಯೆಗಳನ್ನು ಕೇಳಲು ಹಿಂದೇಟು ಹಾಕುತ್ತಿದ್ದರು. ಈ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಸಚಿವ ಬೋಸರಾಜ ಅವರು ಗುತ್ತಿಗೆದಾರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ದುರ್ಗಪ್ಪ, ವೆಂಕಟರೆಡ್ಡಿ ಗುರಸಿಣಗಿ, ಬಸವರಾಜಪ್ಪ ಗೌಡ ದಳಪತಿ, ಗುತ್ತಿಗೆದಾರರಾದ ಸಾಹೇಬರೆಡ್ಡಿ ಮುಂಡರಕೇರಿ ಇತರರು ಉಪಸ್ಥಿತರಿದ್ದರು.