ಯಾದಗಿರಿ | ಎಲ್ಲಾ ಧರ್ಮ ಗ್ರಂಥಗಳು ಮಾನವರಿಗೆ ಒಳ್ಳೆಯದನ್ನೇ ಸಾರಿದೆ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

Update: 2025-04-06 19:00 IST
Photo of Program
  • whatsapp icon

ಯಾದಗಿರಿ : ಜಗತ್ತಿನಲ್ಲಿ ಎಲ್ಲಾ ಧರ್ಮ ಗ್ರಂಥಗಳು ಮಾನವ ಸಂಕುಲಕ್ಕೆ ಒಳ್ಳೆಯದನ್ನೇ ಸಾರಿದೆ. ಆದರೆ ಮನುಷ್ಯರಾದ ನಾವುಗಳು ಅದನ್ನು ತಿಳಿದುಕೊಂಡು ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯ ಪಟ್ಟರು.

ನಗರದ ಸೌದಾಗರ ಫಂಕ್ಷನ್ ಹಾಲ್ ನಲ್ಲಿ ನಡೆದ ಜಮಾತೆ ಇಸ್ಲಾಮಿ ಹಿಂದ್, ಯಾದಗಿರಿ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ವೈಶ್ಯಮ್ಯ, ದ್ವೇಷ ಸಾಧಿಸದೆ ಎಲ್ಲರೂ ಅಣ್ಣತಮ್ಮಂದಿರಾಗಿ ಬಾಳಬೇಕು ಎಂದು ಹೇಳಿದರು ‌

ಈ ವೇಳೆ ಜಮಾತೆ ಇಸ್ಲಾಮ್ ಹಿಂದ್ ಕಲಬುರಗಿ ವಲಯ ಸಂಚಾಲಕ ಜನಾಬ ರಫೀಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಶಾಮಿದ್ ಅಲಿ ಕುಷ್ಟಗಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಪುರಾಸಭೆ ಅಧ್ಯಕ್ಷ ಅಜೀಜ್ ಅಹ್ಮದ್ ಶಹ್ನಾ, ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಡಾ.ಭೀಮಣ್ಣ ಮೇಟಿಶರಣಪ್ಪ ಮಾನ್ಯಾಗಾರ, ಗುಲಾಮ್ ಸಮಧಾನಿ, ಫಾದರ್ ಸಾಜಿ ಜಾರ್ಜ್, ಖಾಜಿ ಇಮ್ತಿಯಾಜುದ್ದೀನ್ ಸಿದ್ದಿಕಿ, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಡಾ.ರಫೀಕ್‌ ಸೌದಾಗರ, ಭಾಷುಮಿಯಾ ವಡಗೇರಿ, ಮಲ್ಲಣ್ಣ ದಾಸನಕೇರಿ, ವಿಶ್ವನಾಥ ಶಿರವಾರಕರ್, ಸೇರಿದಂತೆ ಅನೇಕರು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News