ಬಯಲಾಟ ಉತ್ತರ ಕರ್ನಾಟಕದ ಗಂಡು ಕಲೆ: ತಹಸೀಲ್ದಾರ್ ಶ್ರೀನಿವಾಸ್

ವಡಗೇರಾ: ಬಯಲಾಟವು ಉತ್ತರ ಕರ್ನಾಟಕ ಭಾಗದ ಗಂಡು ಕಲೆಯಾಗಿದ್ದು ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.
ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ರೇಣುಕಾ ದೇವಿ ಚರಿತ್ರೆ ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಟಿವಿ ಮೊಬೈಲ್ ಸಿನಿಮಾ ಧಾರವಾಹಿಗಳ ಹಾವಳಿಯಿಂದ ಬಯಲಾಟ, ಡಪ್ಪಿನಾಟ, ಕೋಲಾಟ, ಅಂತಿ ಪದ ಗೀಗಿ ಪದ ಸೋಬಾನೆ ಪದಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಬಯಲಾಟಗಳು ದೇವಾನು ದೇವತೆಗಳ ಹಾಗೂ ನಿಜ ಜೀವನದ ಅರ್ಥಗರ್ಭಿತ ಪುರಾಣ ಕಥೆಗಳ ರೂಪವೇ ಬಯಲಾಟ ವಾಗಿದೆ ಅಳಿವಿನಂಚಿನಲ್ಲಿರುವ ಬಯಲಾಟವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಿರುವ ಪಟ್ಟಣದ ಯುವಕರು ಮತ್ತು ರೈತರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾಂಗ್ರೆಸ್ ಯುವ ಮುಖಂಡ ಸಂಗು ಗೌಡ ಮಾಲಿ ಪಾಟೀಲ್ ಬಯಲಾಟ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಚಯ್ಯ ಸ್ವಾಮಿ ಸ್ತಾವರಮಠ ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಮಲ್ಲುಗೌಡ ಪೊಲೀಸ್ ಪಾಟೀಲ್, ಸಿದ್ದಣ್ಣ ಮಾಸ್ತರ, ಬಸವರಾಜ್ ನೀಲಹಳ್ಳಿ, ಹಣಮಂತರಾಯ ಜಡಿ, ಮಲ್ಲಪ್ಪ ಇಟ್ಟಿಗಿ, ಹೃಷಿಕೇಶ್ ಕುಲ್ಕರ್ಣಿ, ವಿಶ್ವನಾಥ್ ರೆಡ್ಡಿ ಬಸರೆಡ್ಡಿ, ಸಿರೇಸ್ತೆದಾರ ರಾಮನಗೌಡ , ಕಂದಾಯ ನಿರೀಕ್ಷಕ ಬಸವರಾಜ, ಪ್ರಮೋದ್ ಸ್ವಾಮಿ, ನಿಂಗಣ್ಣ ಜಡಿ, ಶಂಕ್ರು ಕರಣಿಗಿ, ದೇವಪ್ಪಗೌಡ, ಕಾಸಿಂ ಅಲಿ ಕಾರ್ಪೆಂಟರ್, ಅಬ್ದುಲ್ ಚಿಗಾನೂರ, ಸಿದ್ಲಿಂಗಪ್ಪ ಪಿಡ್ಡೆಗೌಡ, ಶಿವು ಕೊಂಕಲ, ರೆಡ್ಡಪ್ಪಗೌಡ, ಗುರು ನಾಟೇಕಾರ, ಮಲ್ಲು ಬೋಕ್, ಬಸಯ್ಯಸ್ವಾಮಿ ಊಳ್ಳೆಸೂಗುರ, ಭೀಮಣ್ಣ ಬೂದಿನಾಳ, ಮಲ್ಲಣ್ಣ ನೀಲಳ್ಳಿ, ಮಲ್ಲಣ್ಣ ಹೊರಟುರ, ಇಮಾಮ್ ಕಂಡಕ್ಟರ್, ಭೀಮಣ್ಣ ಮಡಿವಾಳ, ಸಣ್ಣ ತಿರಕಪ್ಪ ಬುಸ್ಸೇನಿ ,ದೇವು ಜಡಿ, ಗಡ್ಡೆಪ್ಪ, ಮತ್ತು ಬಯಲಾಟದ ಮಾಲೀಕರು ವ್ಯವಸ್ಥಾಪಕರು ಕಲಾ ಪೋಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಿಕ್ಷಕ ವಾಸುದೇವ್ ಮರಕಲ್ ನಿರೂಪಿಸಿದರು, ಫಕೀರ್ ಅಹ್ಮದ್ ಮರಡಿ ವಂದಿಸಿದರು.