ಯಾದಗಿರಿ | ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ; ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಮತ್ತು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
2024-25 ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿ, ಯಾದಗಿರಿ ಮತಕ್ಷೇತ್ರದ ಶಹಾಪೂರ ತಾಲೂಕಿನ ಗುಲಸರಂ ಗ್ರಾಮದಿಂದ ಮಾಲಹಳ್ಳಿ ಗ್ರಾಮದವರೆಗೆ 5.48 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಯ ಅಂದಾಜು 529.00 ಲಕ್ಷ ರೂ.ಗಳ ಮತ್ತು ಯಾದಗಿರಿ ಮತಕ್ಷೇತ್ರದ ಶಹಾಪೂರ ತಾಲೂಕಿನ ಮಾಲಹಳ್ಳಿ ಗ್ರಾಮದಿಂದ ಉಳ್ಳೆಸೂಗೂರ ಗ್ರಾಮದವರೆಗೆ 3.48ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಯ ಅಂದಾಜು 334.60 ಲಕ್ಷ ರೂ. ಗಳ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.
ಶುಕ್ರವಾರ ಭೂಮಿ ಪೂಜೆ ಮಾಡಲಾದ ಈ ಎಲ್ಲ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಗುಣಮಟ್ಟದಿಂದ ಮಾಡಬೇಕೆಂದು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಕುಂದು ಕೊರತೆಗಳನ್ನು ಆಲಿಸಿ, ಶೀಘ್ರದಲ್ಲಿ ಬೇಡಿಗಳನ್ನು ಈಡೇರಿಸುವಂತೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಥಾನ್ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಪ್ರವೀಣ ಕುಮಾರ್, ಉಳ್ಳೆಸುಗೂರ ಗ್ರಾಮ ಪಂಚಾಯತಿ ಅಧ್ಯಕ್ಷ ಶರಣಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸಿದ್ದಲಿಂಗರೆಡ್ಡಿ ಉಳ್ಳೆಸೂಗುರು, ಭೀಮಣ್ಣಗೌಡ, ಈರಣ್ಣಗೌಡ, ಸಿದ್ದರಾಯ್ಯ ಸ್ವಾಮೀ, ಖಾಜಾ ಮೈನೋದಿನ್ ಮೀರ್ಚಿ, ಗುತ್ತಿಗೆದಾರ ಮಹಾದೇವಪ್ಪ ಯಲಸತ್ತಿ, ಶಿವಕುಮಾರ ಕರದಳ್ಳಿ ಸೇರಿದಂತೆ ಮತ್ತಿತರರು ಇದ್ದರು.