ಯಾದಗಿರಿ | ವಾಲ್ಮೀಕಿ ಸಮಾಜದ ಒಗ್ಗಟ್ಟಿಗೆ ಪ್ರಯತ್ನಿಸಿದ ಮಹಾನ್ ಚೇತನ ಪುಣ್ಯಾನಂದಪುರಿ ಸ್ವಾಮೀಜಿ : ಭೀಮರಾಯ ಠಾಣಗುಂದಿ

ಯಾದಗಿರಿ : ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ವಾಲ್ಮೀಕಿ ಗುರುಪೀಠದ ಲಿಂಗೈಕ್ಯ ಶ್ರೀ ಜಗದ್ಗುರು ಪುಣ್ಯನಂದ ಪುರಿ ಮಹಾಸ್ವಾಮಿಗಳ 18ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮವು ವಾಲ್ಮೀಕಿ ಸಮಾಜದ ಮುಖಂಡರು ಆಚರಿಸಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಆಯೋಜಿಸಿದ ಶ್ರೀ ಜಗದ್ಗುರು ಪುಣ್ಯಾನಂದ ಪುರಿ ಮಹಾಸ್ವಾಮಿಗಳಿಗೆ ಪುಷ್ಪಾರ್ಚನೆ ಮಾಡಿ ವಾಲ್ಮೀಕಿ ಸಮಾಜದ ಮುಖಂಡ ಭೀಮರಾಯ ಠಾಣಗುಂದಿ ಮಾತನಾಡಿ, ಪೂಜ್ಯ ಶ್ರೀ ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿ ವಾಲ್ಮೀಕಿ ಸಮುದಾಯದ ಜೀವಾಳವಾಗಿದ್ದರು. ಅವರು ಮಾರ್ಗದರ್ಶನ ನಮಗೆ ದಾರಿದೀಪವಾಗಿದೆ ಅವರು ವಾಲ್ಮೀಕಿ ನಾಯಕ ಸಮಾಜದ ಏಳಿಗೆಗಾಗಿ ಹಗಲಿರಳು ಶ್ರಮಿಸಿದ್ದಾರೆ. ವಾಲ್ಮೀಕಿ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದ ಮಹಾನ್ ಚೇತನ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿವೃತ್ತ ತಹಶಿಲ್ದಾರರಾದ ಸಿದ್ದಲಿಂಗಪ್ಪ ನಾಯಕ, ಯಾದಗಿರಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಸಾಹೇಬಗೌಡ ನಾಯಕ ಗೌಡಗೇರ, ಶರಣಪ್ಪ ಜಾಕನಳ್ಳಿ, ಬಸ್ಸು ಗೊಂದೆನೂರ, ದೊಡ್ಡಯ್ಯ ಹಳಿಗೇರ, ಮಲ್ಲು ಕಟಕಟಿ ಹೆಡಗಿಮದ್ರಿ, ಸಿದ್ದಪ್ಪ ಕೂಯಿಲೂರು, ಆಂಜನೇಯ ಮಲ್ಹಾರ, ಸಿದ್ದಪ್ಪ ಕ್ಯಾಸಪನಳ್ಳಿ, ಕಾಶಪ್ಪ ದೊರೆ, ಸಾಬು ನಿಲ್ಹಳ್ಳಿ, ಈಶಪ್ಪ ಹೆಡಗಿಮದ್ರಿ, ನಾಗಪ್ಪ ಠಾಣಗುಂದಿ, ಮಂಜುನಾಥ ಬಳಿಚಕ್ರ, ವಾಲ್ಮೀಕಿ ಸಮಾಜದ ಭಾಂದವರು ಭಾಗವಹಿಸಿದ್ದರು.