ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ಗೆ ಯಾದಗಿರಿಯ ಅನ್ನಪೂರ್ಣ ಆಯ್ಕೆ

Update: 2025-02-26 20:36 IST
ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ಗೆ ಯಾದಗಿರಿಯ ಅನ್ನಪೂರ್ಣ ಆಯ್ಕೆ
  • whatsapp icon

ಸುರಪುರ: ಮಾ. 30 ರಂದು ಆಂಧ್ರಪ್ರದೇಶದ ಗುಂಟೂರುನಲ್ಲಿ ನಡೆಯುವ ಎನ್‌ಟಿಪಿಸಿ ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ಗೆ ಯಾದಗಿರಿಯ ಅನ್ನಪೂರ್ಣ ಸಂಗಣ್ಣ ಆಯ್ಕೆಗೊಂಡಿದ್ದಾರೆ.

ಅರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಅರ್ಚರಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಆಯ್ಕೆ ಪ್ರಕ್ರಿಯೆಯಲ್ಲಿ 13ವರ್ಷದೊಳಗಿನ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ವಿಭಾಗದಲ್ಲಿ ತಾಲೂಕಿನ ದೇವಾಪುರ ಗ್ರಾಮದ ಬಿಲ್ಲುಗಾರಿಕೆ ಕ್ರೀಡಾಪಟು ಅನ್ನಪೂರ್ಣ ಸಂಗಣ್ಣ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅನ್ನಪೂರ್ಣ ಸಾಧನೆಗೆ ತರಬೇತುದಾರ ಮೌನೇಶ ಕುಮಾರ್, ಗ್ರಾಮಸ್ಥರು,‌ ವನವಾಸಿ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ಕರ್ನಾಟಕ ಅರ್ಚರಿ ಕೋಚ್ ಅನಿಲಕುಮಾರ ಹಾಗೂ ಸಂತೆಮಾರನಹಳ್ಳಿ ರಘು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News